dheerendra teertha rayara mutt yati 1785 stutih
ವರದಾ ನದಿ ತೀರದೀ ಶೋಭಿಪ -
ಯತಿವರನ್ಯಾರೇ ಪೇಳಮ್ಮಾ ।
ಗುರು ಸುಧೀಂದ್ರ ಸುತ ಗುರು-
ರಾಯರ ಸನ್ನಿಧಾನ ಪಾತ್ರಾ ।
ಧೀರೇಂದ್ರ ಯತಿ -
ನೋಡಮ್ಮಯ್ಯಾ ।।
ನಾರಾಯಣೋಪನಿಷ-
ದ್ವ್ಯಾಖ್ಯಾನ ಮನ್ಯುಸೂಕ್ತ ।
ಗುರುಗುಣಸತ್ವವನ -
ವಿಷಯವಾಕ್ಯ ಸಂಗ್ರಹ ।
ಗುರುಸ್ತೋತ್ರ ಅಂಭ್ರಣೀ-
ಸೂಕ್ತಕೆ ವ್ಯಾಖ್ಯಾನ ।
ವಿರಚಿಸಿದ ಧೀರೇಂದ್ರ -
ವಸುಧೇಂದ್ರ ಪುತ್ರ ಕಾಣಮ್ಮಾ ।।
ಧರಣಿಯಲಿ ಗುರುರಾಘವೇಂದ್ರ -
ವಂಶದಿ ಜನಿಸಿ । ಭೂ ।
ಸುರರ ವಂದ್ಯ ವಾದೀಂದ್ರ -
ಪೌತ್ರ ಕಾಣಮ್ಮಾ ।
ಗುರು ಜಯಾರ್ಯರ -
ಸುಧಾಕ್ಕೆ ವ್ಯಾಖ್ಯಾನ ರಚಿಸಿ ।
ಧರಣಿಯಲ್ಲಿ ಖ್ಯಾತರಾದ ಧೀರೇಂದ್ರ -
ಯತೀಂದ್ರನು ನಮ್ಮ -
ಧೀರ ಶ್ರೀ ವೇಂಕಟನಾಥನ
ದೂತನು ಕಾಣಮ್ಮ ।।
****
No comments:
Post a Comment