Saturday, 1 May 2021

ವರದಾ ತೀರದಿ ಶೋಭಿಪ ಯತಿವರನ್ಯಾರೇ ಪೇಳಮ್ಮಯ್ಯಾ ankita gurujagannatha vittala dheerendra teertha stutih

dheerendra teertha rayara mutt yati 1785 stutih

ತಾಳ : ರೇಗುಪ್ತಿ   ತಾಳ : ಆದಿ 


ವರದಾ ತೀರದಿ ಶೋಭಿಪ । ಯತಿ ।

ವರನ್ಯಾರೇ ಪೇಳಮ್ಮಯ್ಯಾ ।। ಪಲ್ಲವಿ ।।


ತ್ವರದಿ ಭಕುತರ ದುರಿತವ ತರಿದತಿ ।

ತ್ವರದಿ ಪಾಲಿಪಾ ಧೀರೇಂದ್ರ ಕಾಣಮ್ಮಾ  ।। ಅ. ಪ ।।


ಸುಂದರ ತಮ ವೃಂದಾವನ ಶುಭತರ ।

ಮಂದಿರಗತನ್ಯಾರೇ ಪೇಳಮ್ಮಯ್ಯಾ ।

ನಂದದಿ ಮಹಜನ ಸಂದಣಿ ಮಧ್ಯದಿ ।

ಚಂದಿರ ತೆರದಿಹನ್ಯಾರೇ ಪೇಳಮ್ಮಯ್ಯಾ ।।

ಇಂದಿರಪತಿ ಗುಣ ವೃಂದವ ಭಜಿಸುತ ।

ನಂದದಿ ಶೋಭಿಪನ್ಯಾರೇ ಪೇಳಮ್ಮಯ್ಯಾ ।

ಅಂಧ ಬದಿರರ ವೃಂದಗಳಿಗಿಷ್ಟವ ।

ನಿಂದು ನೀಡುವ ವಾದೀಂದ್ರರ ತನುಜ ।। ಚರಣ ।।


ಮೂಢ ಮತಿಯನು ಓಡಿಸಿ ಜನರಿಗೆ ।

ಗಾಢ ಭಕುತಿಯನು ನೋಡಮ್ಮಯ್ಯಾ ।

ಬೇಡುವ ಭಕುತರು ಮಾಡುವ ಸೇವೆಗೆ ।

ನೀಡುವ ವರಗಳನ್ಯಾರೇ ನೋಡಮ್ಮಯ್ಯಾ ।।

ಪಾಡುವ ದಾಸರು ಬೇಡುವ ಇಷ್ಟವ ।

ನೀಡುವದಿನ್ಯಾರೇ ನೋಡಮ್ಮಯ್ಯಾ ।

ರೂಢಿಯೊಳಗೆ ಇಷ್ಟ ನೀಡುವ ವಿಷಯದಿ ।

ಜೋಡುಗಾಣೆನಾ ನೋಡಮ್ಮಯ್ಯಾ  ।। ಚರಣ ।।


ಭೂತ ಪೀಡೆ ಮಹ ಪ್ರೇತ ಪಿಶಾಚಿಯ ।

ವ್ರಾತಗಳು ಬಲು ನೋಡಮ್ಮಯ್ಯಾ ।

ಭೀತಿ ಬಡುತ ಮಹ ಆತುರದಲಿ ಈ ।

ಭೂತಳ ಬಿಡುತಿಹವೋ ನೋಡಮ್ಮಯ್ಯಾ ।

ಯಾತುಧಾನಗಣ ಈತನ ನಾಮದ ।। 

ಭೀತಿಗೆ ಪೋಗುತಿಹದು ನೋಡಮ್ಮಯ್ಯಾ ।

ತಾತನ ತೆರದಲಿ ಈತನು ನಿಜಪದ ।

ದೂತರ ಪೊರೆವನು ನೋಡಮ್ಮಯ್ಯಾ ।

ದಾತ ಗುರು ಜಗನ್ನಾಥವಿಠ್ಠಲಗೆ ।

ಪ್ರೀತ ಜನರೊಳು ಪ್ರೀತನೀತನಮ್ಮಾ ।। ಚರಣ ।।

****


 

No comments:

Post a Comment