..kruti by pradyumna teertha ಪ್ರದ್ಯುಮ್ನತೀರ್ಥರು
ನಿರುತದಿಂದಿಳೆಯೊಳು ಅರಸಿ ನೋಡಲು ಕಾಣೆ
ಗುರು ಸತ್ಯಜ್ಞಾನರಿಗೆ ಪ
ಸರಿ ಇಲ್ಲಿವರ ಚರಣಕಮಲವ ನಿತ್ಯ
ಆರಾಧಿಪರ ದುರಿತ ಹರಿಪರ ಅ.ಪ
ಸತ್ಯ ಜ್ಞಾನ ಗುರೋ ನೀ ಗತಿ ಎಂದವರ
ನಿತ್ಯದಿ ಬಿಡದೆ ಕಾಯ್ವ
ಅತ್ಯಾದರದಿ ಮಧ್ವಮತ ಸ್ಥಾಪಕರಾಗಿ
ಮಿಥ್ಯಾ ಜ್ಞಾನಗಳಳಿದ | ಮೆರೆದ 1
ಸತ್ಯಧೀರರಿಂದ ಯತ್ಯಾಶ್ರಮ ಪಡೆದು
ರತ್ಯಾದಿ ವಿಷಯವ ಬಿಟ್ಟು
ಯತ್ಯಾಶ್ರಮೋಕ್ತ ಕೋಪತ್ಯಾಗಾದಿಗಳನು
ವ್ಯತ್ಯಾಸಿಲ್ಲದೆ ನಡೆಸಿ | ಶೋಭಿಸಿ2
ಗುರು ಆರಾಧನಿ ದಿನ ತೀರ್ಥವ ಕೊಡುತಿರೆ
ವರ ಸುವಾಸಿನಿ ಒಬ್ಬಳೂ
ಕರವ ನೀಡಲು ಬಂದು ಅರಿತು ವಿಧವತ್ವ
ನೆರಪೇಳ್ದರಪರೋಕ್ಷದಿ | ಭೂತಳದಿ 3
ಮರುದಿನ ಆರೋಗಣೆಯ ಸಮಯದಿ ಮಳೆ
ಭರದಿಂದ ಸುರಿಯುತ್ತಿರೆ
ಮೊರೆಯಿಡೆ ಎಡಬಲದವರು ಅದನು ಕೇಳೆ
ದೂರಸ್ಥಳಿಹಳೆಂದ್ಹೇಳಿರು | ಪಂಕ್ತಿಯಲಿ 4
ಈ ರೀತಿಯಿಂದಲಿ ತೋರಿಸಿ ಮಹಿಮೆಯ
ಇರಿಸೆ ಮಂತ್ರಿಸಿ ಫಲವ
ಭರದಿ ಸುರಿವ ಮಳೆ ತ್ವರಿತದಿ ನಿಲ್ಲಲು
ಅರಿತು ವಿಚಾರಿಸಲು | ನಿಜವಿರಲು5
ನಿವೃತ್ತಿ ಸಂಗಮದಿ ಅವನಿಜೆ ಪತಿ ಪೂಜೆ
ಸಾವಧಾನದಿ ಮಾಡಲು
ಇವರ ಮನೋಧಾರಡ್ಯ ಜವದಿ ಜಯಾಮುನಿ
ಅವನಿಗರುಹಬೇಕೆಂದು | ತಾ ಬಂದು 6
ಬರುತಿರೆ ಉರಗಾಕಾರದಿಂದಲಿ ಬಂದು
ಅರಿಯದ ಜನರು ಕೂಗೆ
ಮಾರಮಣನ ಧ್ಯಾನ ಜರಿಯದೆ ಅವರಿಗೆ
ತೋರಿದರಭಯವನು | ವಿಚಿತ್ರವನು 7
ಭೂವೈಕುಂಠದಿ ವಿಶ್ವರೂಪದರ್ಶನಕ್ಹೋಗೆ
ಮಾರ್ಗವ ಕೊಡದಿರಲು
ಭಾವದಿ ಧ್ಯಾನಿಸೆ ಶ್ರೀ ವಲ್ಲಭನಾಮ
ಧರಿಸದೀರಾಧರಿಸೇ | ಧರಿಸಿ 8
ಈ ವಿಧ ಮಹಿಮೆಯ ತೋರಿಸಿ ಜಗದೊಳು
ಗೋದಾತೀರದಿ ಶೋಭಿಪ
ಅವನಿಪ ಮಹೇಂದ್ರ ಭುವನ ಶ್ರೀ ನರ
ಹರಿ ನಿನ್ನ ಮಾಘಸಿತದಿ | ಸ್ಮರಿಸಿದ9
***
No comments:
Post a Comment