Thursday 5 August 2021

ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ankita kamalanabha vittala

 ..

kruti by Nidaguruki Jeevubai

ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ

ಪಾಡಿ ತೂಗುವೆ ಮುದದಿ ಪ


ಯೋಗಿಗಳರಸನೆ ಸಾಗರಶಯನನೆ

ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ

ಹರ ಬ್ರಹ್ಮಾದಿಗಳು ಕೂಡಿ ನಿನ್ನನು

ಪರಿಪರಿ ವಿಧದಲಿ ಕೊಂಡಾಡಿ

ಸುರರು ಗಂಧರ್ವರು ವರಋಷಿಗಳು ಕೂಡಿ

ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1


ಗೋಕುಲದ ನಾರಿಯರು ಗೋವಿಂದ ನಿನಗೆ

ಬೇಕಾದ ಪಾಲ್ಮೊಸರು

ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ-

ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2

ದಿಟ್ಟ ಗೋಪಾಲ ಕಯ್ಯೊಳಗೊಂದು

ಪುಟ್ಟ ಬಚ್ಚೆಯ ಪಿಡಿದು

ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು

ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3


ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ

ದನುಜದಲ್ಲಣ ನಿನ್ನನು

ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ

ವನಿತೆಯರೋಕುಳಿಗಳನಾಡಿ ನರ್ತಿಸುವರೊ 4


ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ

ಉದ್ಧಾರವಾಗುವುದೇನು

ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ

ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5


ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ

ಹಯಗ್ರೀವ ನರಸಿಂಹನೆ

ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ

ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6

ನವನೀತ ಚೋರನೆಂದು ನಾರಿಯರೆಲ್ಲ

ನವವಿಧ ನುಡಿ ನುಡಿವರೊ

ಭುವನ ಮೋಹನಸ್ವಾಮಿ ಸುಮನಸ 

ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7

***


No comments:

Post a Comment