Wednesday, 1 September 2021

ಬಾರಯ್ಯ ಗೋವಿಂದಾ ಬಾರೋ ನಂದನ ಕಂದಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಾರಯ್ಯಾ ಗೋವಿಂದಾ | ಬಾರೋ ನಂದನ ಕಂದಾ ಪ 


ಕನಕಗರ್ಭನ ತಂದೆ | ಕನಕಮೃಗವ ಕೊಂದೆ | ಕನಕಾಂಬರಧರ | ಕನಕನಯನ ಹರ | ಕನಕವಕ್ಕಿಗಮನ | ಕನಕಾಭರಣ1 

ಹರಿಯಾನಂದನ ಕೊಲಿಸಿ | ಹಿರಯಾನಂದನನುಳಿಸಿ | ಹರಿಯಾ ಸುತನುತ | ಹರಿಯಾ ರಿಪುಸುತ | ಹರಿಯೇ ಬಾಯೆನೆ ಹರಿಯಾದೆ 2 

ಗೋಕುಲವರಾಧಾರಾ | ಗೋಕುಲ ವಿಹಾರಾ | ಗೋಕರ್ಣ ಶಯನಾ | ಗೋಕೋಟಿ ತೇಜಾ | ಮಹಿಪತಿ ಸುತ ಪ್ರಭು ಗೋಪಾಲಾ 3

***


No comments:

Post a Comment