ಕಾಖಂಡಕಿ ಶ್ರೀ ಕೃಷ್ಣದಾಸರು
ಮಾತಿನ ಸುಖವೇನೋ ಸುಖವೇನೋ | ರೀತಿಯನರಿಯದೆ ತಾನು ಪ
ಸಂತರ ವೇಷವ ಹಿಡಿವೀ | ಮನದಲಿ | ಶಾಂತಿಯ ಮನಗುಣ ಬಿಡುವೀ 1
ಪಡಿಯದೆ ಆತ್ಮ ವಿಚಾರಾ | ದೋರುವಿ | ನುಡಿಯಂಗಡಿಯ ಪಸಾರಾ 2
ಇಂದು | ಹೇಳುವಿ | ಸರ್ವಂ ವಾಸುದೇವೆಂದು ಮ 3
ತರಂಗವಿಲ್ಲದ ಶರಧಿಯಂತೆ | ಇರುವುದು ಪರಮ ಸಮಾಧಿ 4
ತಂದೆ ಮಹಿಪತಿ ಬೋಧಾ | ಮನನಕೆ | ತಂದವನೇ ಸುಖಿಯಾದಾ 5
***
No comments:
Post a Comment