Wednesday, 1 September 2021

ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ pa


ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು 1 

ತರಳಗುಂಟೆ ಭಯವು ಘಟಸರ್ಪದ ಎರಳೆಗುಂಟೆ ಖೂನ ಮೃಗಜಲವೆಂಬುವದ ಸೋರೆಗುಂಟೆ ಮಾತು ಚಾರ್ತುಯದ 2 

ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ ಮನದಿಚ್ಛೆಯಿದ್ದವಗೆ ಎಲ್ಲಿ ಧ್ಯಾನ ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳದೆ ಜನ್ಮಕೆ ಬಂದಿದೇನ 3

***


No comments:

Post a Comment