Wednesday, 1 September 2021

ಏನು ಹೇಳಲಿ ನಿನಗ ಮನವೇ ನಾ ಇನ್ನೇನು ಹೇಳಲಿ ನಿನಗೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಏನು ಹೇಳಲಿ ನಿನಗ ಮನವೇ ನಾ ಇನ್ನೇನು ಹೇಳಲಿ ನಿನಗೆ ಶ್ರೀನಾಥನಂಘ್ರಿಯ ನೀನೋಲೈಸದಿಹುದೇನೋ ಪ 


ಮನುಷ್ಯದೇಹ ಧರಿಸಿ ಸದ್ಗತಿಯ | ಜ್ಞಾನದಾರಿ ತ್ಯಜಿಸಿ ನೀ ಭಕುತಿ ಸುಖ | ಖೂನವಿಲ್ಲದೆ ಚರಿಸಿ | ಏನೂ ಇಲ್ಲದೆ ವಿದ್ಯಾ ಮಾಟಕ ಭ್ರಮಿಸಿಹುದೇನಾ 1 

ವಿಷಯ ಸುಖ ಹರಿದು ಸಂಸಾರದಿ | ನಿಶಿದಿನದಲಿ ಸವೆದು ತಾಪತ್ರಯ | ಘಸಣಿಯೊಳಗ ಕುದಿದು | ಪಶುವಿನ ಪರಿಯಲಿ ಯಚ್ಚರ ಮರೆದಿಹುದೇನಾ 2 

ಇನ್ನಾರೆ ಹಿತವರಿಯೋ ಸದ್ಗುರುವಿನ | ಮನ್ನಿಸಿ ಗತಿ ಪಡಿಯೋ ಹರಿಯ ನಾಮವಾ | ಚನ್ನಾಗಿ ನಂಬಿ ನಡಿಯೋ | ಸನ್ನುತ ಮಹಿಪತಿ ಬೋಧಾಮೃತ ಸವಿಯದೇನಾ 3

***


No comments:

Post a Comment