Thursday 12 December 2019

ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ ankita mahipati

ಸಾರಂಗ್ (ಮಾಲಕಂಸ್ ) ರಾಗ ಝಂಪೆತಾಳ

ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ
ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ||ಪ||

ವಿಷಯಲಂಪಟಗೆ ಎಲ್ಲಿಹುದು ತಾ ವಿರಕ್ತಿಯು
ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು
ಮುಸುಕಿದ ಮಾಯದವಗೆ ಲ್ಲಿಹುದು ಮುಕ್ತಿಯು
ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು ||೧||

ಮರುಳಗುಂಟೆ ಅರಿವು ರಾಜಸನ್ಮಾನದ
ತರಳಗುಂಟೆ ಭಯವು ಘಟಸರ್ಪದ
ಎರಳೆಗುಂಟೆ ಖೂನ ಮೃಗಜಲವೆಂಬುವದ
ಸೋರೆಗುಂಟೆ ಮಾತು ಚಾತುರ್ಯದ ||೨||

ಕನಸು ಕಾಂಬುವಗೆ ಎಲ್ಲಿಹುದು ತಾನಿಹ ಸ್ಥಾನ
ಮನದಿಚ್ಛೆ ಇದ್ದವಗೆ ಎಲ್ಲಿಯ ಧ್ಯಾನ
ದೀನಮಹಿಪತಿಸ್ವಾಮಿ ಕಾಣದವಗೆಲ್ಲಿ ಘನ
ಅನುಭವಿಸಿಕೊಳದೆ ಜನ್ಮಕೆ ಬಂದಿದೇನ ||೩||
*********

No comments:

Post a Comment