Thursday, 12 December 2019

ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ankita mahipati

ಮಾಂಡ್ ರಾಗ ಕೇರವಾ ತಾಳ

ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು
ವಿಷ್ಣುನರಿತವನೆ ವೈಷ್ಣವರು ||ಧ್ರುವ||

ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ
ಯುಕ್ತಿ ತಿಳಿದವನೆ ವೈಷ್ಣವನು ||೧||

ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ
ಹರಿಯ ನೆನೆಯುವವನೆ ವೈಷ್ಣವನು ||೨||

ಹರಿ ಓಂ ತತ್ಸದಿತಿಯೆಂಬ ಹರಿವಾಕ್ಯವನು
ಅರಿತವನೆ ಪರಮ ವೈಷ್ಣವನು ||೩||

ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು
ಹರಿಯ ಸ್ಮರಿಸುವನೇ ವೈಷ್ಣವನು ||೪||

ಪರದೆ ಇಲ್ಲದಪಾರಬ್ರಹ್ಮಸ್ವರೂಪವನು
ಗುರುತ ಕಂಡವನೇ ಪರಮ ವೈಷ್ಣವನು ||೫||

ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟೆ
ಅರಿತು ಬೆರೆದವನೆ ಪರಮ ವೈಷ್ಣವನು ||೬||

ಮೂಲಮೂರುತಿಗಾಗಿ ಮೇಲ್ಗಿರಿಯನೇರುವ
ಕೀಲ ತಿಳಿದವನೆ ವೈಷ್ಣವನು ||೭||

ಉಂಟಾಗಿ ಇರುಳ್ಹಗಲೆ ಗಂಟ್ಹಾಕಿ ಹರಿಪಾದ
ಬಂಟನಾದವನೆ ವೈಷ್ಣವನು ||೮||

ಆರು ಕಂಟಕ ನೀಗಿ ಮೂರು ಬಲೆಯನು ದಾಟಿ
ಮೀರಿ ನಿಂದವನೆ ವೈಷ್ಣವನು ||೯||

ಆಶೆಯನೆ ಜರಿದು ನಿರಾಶೆಯನೆ ಬಲಿದು
ಹರಿದಾಸನಾದವನೆ ವೈಷ್ಣವನು ||೧೦||

ದ್ವಾದಶನಾದವನು ಸಾಧಿಸಿ ಕೇಳುತಲಿ
ಭೇದಿಸಿದವನೆ ವೈಷ್ಣವನು ||೧೧||

ಅನಿಮಿಷನೇತ್ರದಲಿ ಅನುದಿನ ಘನಸುಖವ
ಅನುಭವಿಸುವವನೇ ವೈಷ್ಣವನು ||೧೨||

ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ
ಪುಷ್ಟವಾಗಿ ದೋರುವನೆ ವೈಷ್ಣವನು ||೧೩||

ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ
ಕೊಟ್ಟ ಆ ಗುರು ಪರಮ ವೈಷ್ಣವನು ||೧೪||
****

ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವನು| 1 

ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು 2 

ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವನೆ ವೈಷ್ಣವನು 3 

ಹರಿ:ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು 4 

ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವವನೆ ವೈಷ್ಣವನು 5 

ಪರದೆ ಇಲ್ಲದೆ ಪಾರ ಬ್ರಹ್ಮಸ್ವರೂಪನು ಗುರುತ ಕಂಡವನೇ ಪರಮ ವೈಷ್ಣವನು6 

ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟಿ ಅರಿತು ಬೆರೆದನೆ ಪರಮ ವೈಷ್ಣವನು 7 

ಮೂಲ ಮೂರುತಿಗ್ಯಾಗಿ ಮೇಲಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು 8 

ಉಂಟಾಗಿ ಇರುಳ್ಹಗಲಿ ಗಂಟ್ಹಾಕಿ ಹರಿಪಾದ ಬಂಟನಾದವನೆ ವೈಷ್ಣವನು 9 

ಕಂಟಕ ನೀಗಿ ಮೂರು ಬಲೆಯನು ದಾಟಿ ಮೀರಿ ನಿಂದವನೇ ವೈಷ್ಣವನು 10 

ಆಶಿಯನೆ ಜರಿದು ನಿರಾಶೆಯನು ಬಲಿದು ಹರಿದಾಸನಾದವನೆ ವೈಷ್ಣವನು 11 

ದ್ವಾದಶನಾದವನು ಸಾಧಿಸಿ ಕೇಳುತಲಿ ಭೇದಿಸಿದವನೆ ವೈಷ್ಣವನು 11 

ಅನುದಿನ ಘನಸುಖವು ಅನುಭವಿಸುವನೆ ವೈಷ್ಣವನು 12 

ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ ಪುಷ್ಟವಾಗಿದೋರುವನೆ ವೈಷ್ಣವನು 13 

ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ ಕೊಟ್ಟಾ ಗುರು ಪರಮ ವೈಷ್ಣವನು 14

*****

No comments:

Post a Comment