Wednesday, 22 December 2021

ನರಹರಿ ತಾರಿಸೊ ಎನ್ನಾ ದುರಿತಾರಿ ankita mahipati

 ರಾಗ –  :  ತಾಳ –


ನರಹರಿ ತಾರಿಸೊ ಎನ್ನಾ ದುರಿತಾರಿ 

ಮುಕ್ತಿ ದಾರಿ ಸಾರಿ ದೋರಿ ದಯಬೀರಿ ll ಪ ll


ಕಮಲಾಯ ತಾಂಬಕ ಕರುಣ ಜಲನಿಧಿಸಿರಿ

ಕಮನೀಯ ಲಾವಣ್ಯ ರೂಪ ಶಂಖಾರಿ

ವಿಮಲಗದಾಂಭುಜಧಾರೀ

ಸುಮನ ಸಾಧುಜನ ಹೃದಯ ವಿಹಾರಿ ll 1 ll


ಎಲೆ ದೇವ ದೇವ ಎಂದ್ಯ ಜೀವ ಕಾವ ಮುರ ಅರಿ

ಚೆಲುವ ಕಸ್ತೂರಿ ಶ್ರೀಹರೀ 

ವಲಿದು ಮಹಿಪತಿ ಜನಪರೋಪರಿಯಲಿ

ಸಲಹುತಿಹ ಮಾಮಾನೋ ಹಾರಿ ll 2 ll


ಕಾಖಂಡಕಿ ಶ್ರೀ ಕೃಷ್ಣದಾಸರ ಕೃತಿ

***


No comments:

Post a Comment