Wednesday, 22 December 2021

ರಾಮನಾಮಾಮೃತ ಪಾನಾ ankita mohana vittala

 ರಾಗ -  :  ತಾಳ -


ರಾಮನಾಮಾಮೃತ ಪಾನಾ l

ಯಾಮ ಯಾಮಕೆ ಮಾಡಿದವ ಧನ್ಯಾ ll ಪ ll


ಮುನಿಜನ ಸಾಧನಕಘಹನಾ l 

ಮುನಿ ಸತಿಗತಿ ಯಾದವನಾ ll

ಮುನಿದ ಮಾತೆಗೂ ಅಭಿಧಾನನಾದ l

ಮುನಿಜನಾಪ್ತಾ ಶೋಕ ನಿರ್ಲಿಪ್ತಾ ll 1 ll


ಭವತಾರಕ ಮಂತ್ರವಿದೆಂದು ಅನು l

ಭವದಿ ಆನಂದಪಟ್ಟರು ನಂಬಿ ll

ಭವಸೌಭರಿ ಮಾತಂಗಾದಿಗಳಿಂದ l

ಭವನದೊಳರ್ಚನೆಗೊಂಡ ಕೋದಂಡ ll 2 ll


ಮಹಿಜೆ ಸೀತೆ ಮಹಾಸತಿಯಾಗಿ  l 

ಮಾಹಿಮಾನ್ವಿತಳೆಣಿಸಿದಳೀ ಮಂತ್ರದಿ ll

ಮಹಿಯೊಳ್ಮಹದಾದಿ ದೇವ ನಮ್ಮ l

ಮಹಿಧರ ಮೋಹನವಿಟ್ಠಲ ನಾಮಾ ll 3 ll

***


No comments:

Post a Comment