Wednesday, 22 December 2021

ಕರುಣಿಸೋ ರಂಗಾ ಕರುಣಿಸೋ ankita hogareranga narasinga vittala


ಹರಿದಾಸಿ ಶ್ರೀಮತಿ ಪ್ರತಿಭಾ ಅವರ ರಚನೆ


ರಾಗ -  :  ತಾಳ - 


ಕರುಣಿಸೋ ರಂಗಾ ಕರುಣಿಸೋ

ಕರುಣಿಸೋ ಕೃಷ್ಣಾ ಕರುಣಿಸೋ //ಪ//


ನಾ ಮಾಡಿದ ಪಾಪ ಲೋಪವಾಗುವಂತೆ ಕರುಣಿಸೋ //ಅಪ//


ನಾನಾ ಜನ್ಮದಲಿ ನಾನಾ ಯೋನಿಯಲ್ಲಿ ಪುಟ್ಟಿ

 ನಾನ ನೇಕ ಪಾಪ ಕರ್ಮ ಗಳನು ಮಾಡಿಹೆನೋ

ನಾ ಮಾಡಿದ ಆ ಪಾಪಕರ್ಮಗಳೆಲ್ಲವೂ

ನಿನ್ನ ಸೇರಲು ಬಂಧಕವಾಗಿ ಕಾಡುತಿಹುದು ಕೃಷ್ಣಾ //೧//


ನೀನೇ ಈ ಜೀವದ ಯೋಗ್ಯತಾನುಸಾರವಾಗಿ

ಎನಗೆ ಪ್ರೇರೇಪಿಸಿ ಮಾಡಿಸಿದ ಈ ಪಾಪ ಕರ್ಮ

ಜನುಮ ಜನುಮಗಳಲಿ ಕಂಟಕವಾಗಿ ಕಾಡುತ

ನಿನ್ನ ಲಿ ಸ್ಥಿರ ಮನವಿಟ್ಟುಧ್ಯಾನ ಮಾಡದಂತಾಗಿದೆ ರಂಗಾ //೨//


ಇನ್ನಾದರೂ ಈ ಜೀವದ ಮೇಲೆ ಕರುಣೆಯ ತೋರಿ

ಅನ್ಯ ವಾರ್ತೆಯ ಬಿಟ್ಟು ಸದಾ ನಿನಗಾಗಿ ಹಂಬಲಿಸುವಂತೆ

ಅನುಗ್ರಹಿಸಿ ಹೊಗರೆರಂಗ-ನರಸಿಂಗ ವಿಠಲನ 

ಅನನ್ಯವಾಗಿ ಸ್ಮರಣೆ ಮಾಡುವಂತೆ ಕೃಷ್ಣಾ ಕರುಣಿಸೋ//೩//

***


No comments:

Post a Comment