Wednesday, 22 December 2021

ವೆಂಕಟರಮಣ ಶ್ರೀ ವೆಂಕಟರಮಣ ankita aglurugovinda vittala

ಶ್ರೀ ಗುರುಗೋವಿಂದವಿಟ್ಠಲ ದಾಸರ ರಚನೆ

 

ರಾಗ - : ತಾಳ -


ವೆಂಕಟರಮಣ ಶ್ರೀ ವೆಂಕಟರಮಣ ಶ್ರೀ

ವೆಂಕಟರಮಣನೇ ll ಪ ll


ಪಂಕಜೋದ್ಭವ ಪಿತ ಪಿಳ್ಳಂಕೇರಿಯ ವಾಸ

ವೆಂಕಟರಮಣನೇ ll ಅ ಪ ll 


ಭದ್ರ ಮೂರುತಿ ಸಣ್ಣ l ಅದ್ರಿಯಾಶ್ರಯಿಸಿ ನಿಂ

ತಿದ್ದಿ ಕಾರಣವೇನೋ l 

ಶುದ್ಧ ಜನರು ಮಾಳ್ಪ l ಶುದ್ಧ ಸೇವೆಯ ಗೊಂ

ಡುದ್ಧರಿಸಲು ಯೇನೋ ll 1 ll


ನೀರೊಳು ಮುಳು ಮುಳುಗಿ l ಭಾರಿ ಗಿರಿಯ ಪೊತ್ತು 

ಕೋರೆಹಲ್ಲನು ತೋರೇನೋ l 

ಧೀರ ಕಂದನ ಕಾಯ್ದ l ನಾರಸಿಂಹನೆ ಬಲಿಯ 

ದ್ವಾರ ಕಾಯ್ದಿಹದೇನೋ ll 2 ll


ಕ್ರೂರ ನೃಪರ ಸವರಿ l ನಾರಿ ಚೋರನ ಕೊಂದು 

ಜಾರ ಗೋಪೇರ ಕೂಡೇನೊ l 

ಸಾರಿ ತ್ರಿಪುರವನ l ನಾರೇರ ವ್ರತ ಕೆಡಿಸಿ

ವೀರ ರಾವುತನಾದದ್ದೇನೋ ll 3 ll


ಪಂಚ ರೂಪದಿ ಪ್ರ l ಪಂಚವ ವ್ಯಾಪಿಸಿ

ಪಂಚಾತ್ಮಕ ನಾದದ್ದೇನೋ l 

ಅಂಚೆ ಗಮನನಾದಿ l ಪಂಚ ಪಂಚರಲ್ಲಿ

ಸಂಚು ಗೊಳಿಪುದೇನೋ ll 4 ll


ಇಂದ್ರಾ ವರಜ ದೇ l ವೇಂದ್ರ ಗಭೀಷ್ಟದ

ಬಂದಿಲ್ಲಿ ನಿಂದಿರ್ಪುದೇನೋ

ಇಂದು ಕುಲಜ ರಾ l ಜೇಂದ್ರ ಜನಮೇಜಯ 

ಗಂದು ಒಲಿದು ನಿಂತಿಲ್ಲೇನೋ ll 5 ll


ಪಾಂಡವಭೀಷ್ಟದ l ಪುಂಡರೀಕಾಕ್ಷನೆ 

ತೊಂಡರಾಶ್ರಯದಾತಾ l 

ಭಾಂಡಕಾರಕ ಭೀಮ l ತೊಂಡ ಮಾನಾನಂದ 

ಅಂಡಜವಾಹ ವಿಖ್ಯಾತಾ ll 6 ll


ಭಾವ ಶುದ್ಧೀಲಿ ಸ್ತವನ l ದೇವ ಶರ್ಮನು ಮಾಡೆ 

ಭಾವಕ್ಕೊಲಿದು ಮೋಕ್ಷವಿತ್ಯೋ l

ಗೋವ ಕಾವ ಗುರು l ಗೋವಿಂದವಿಟ್ಠಲ ಭಕ್ತಿ 

ಭಾವ ನಿನ್ನಯ ಪದದಲ್ಲಿಯೋ ll 7 ll

***


No comments:

Post a Comment