Wednesday, 22 December 2021

ಶರಣು ಭಾರ್ಗವರಾಮ ಶರಣು ಭಕುತ ಪ್ರೇಮ ankita gurugovinda vittala

 ರಾಗ - : ತಾಳ -


ಶರಣು ಭಾರ್ಗವರಾಮ l ಶರಣು ಭಕುತ ಪ್ರೇಮ 

ಶರಣು ಭವ ಭಯ ಪರಿಹರಾ ll ಪ ll


ಸನಕಾದಿ ಮುನಿವಂದ್ಯ l ಕನಕ ಗರ್ಭ ಜನಕ

ಅನುನಯದಿ ಗೀತೆ ಫ l ಲ್ಗುಣಗೆ ಬೋಧಿಸಿದೆ l

ಎಣೆಯೆ ತವ ಕರುಣ l ಘನವರ್ಷಣಕೆ ಹರಿ 

ಅನಘ ನಿನ್ನಡಿ ನೆಳಲ l ನಾಶ್ರಯಿಪೆ ಎಂದೆಂದೂ ll 1 ll


ಭುವನ ಮೋಹನ ದೇವ l ಭವಗು ಮೋಹಿಪ ಭಾವ 

ದಿವಿಭವರು ತವರೂಪ l ಯವಗಳಿಕ್ಕದಲೇ l

ಸವನ ತ್ರಯದಲಿ ಕಂಡು l ಪವನಾಂತರಾತ್ಮ ಮಾ 

ಧವನೆ ಹಿಗ್ಗುತಲಿ l ಹವಿಷನರ್ಪಿಪರೋ ll 2 ll


ಸರ್ವ ಶಬ್ದಾಭಿಧನೆ l ಸರ್ವ ದೇವೋತ್ತಮನೆ 

ಪರ್ವ ಪರ್ವದಿ ಇದ್ದು l ಪರ್ವ ವಾಚ್ಯಾ l

ದರ್ವಿಯಂದದಲಿಪ್ಪ l ಜೀವನ್ನ ಪೊರೆಯುವ 

ಸರ್ವಭಾರವು ನಿನ್ನದೊ l ಶರ್ವನೊಡೆಯಾ ll 3 ll


ಬಿಂಬನೆಂದೆನಿಸಿ ಪ್ರತಿ l ಬಿಂಬರುಗಳ ಜ್ಞಾನ

ದಂಭಲವ ಕೊಡಿಸುತ್ತ l ಇಂಬು ನಿನ್ನಡಿ ಕಮಲದಿ l

ಕಂಬು ರವಿ ಗದಧರನೆ l ತುಂಬಿ ಎನ್ನೊಳು ನೀನು 

ಸಂಭ್ರಮದಿ ಕಾಯುವುದು l ಕುಂಬಿಣಿಯ ರಮಣಾ ll 4 ll


ವಿಶ್ವರೂಪಿಯೆ ನಿನ್ನ l ನಿಶ್ವಸನ ವೇದಗಳು

ಸ್ವಸ್ವರೂಪದಿ ಮುಖ್ಯ l ತವ ಮಹಿಮೆ ಪ್ರತಿಪಾದ್ಯವೊ l

ವಿಶ್ವ ತೈಜಸ ಪ್ರಾಜ್ಞ l ತ್ರೈಯವಸ್ಥೆ ಪ್ರವರ್ತಕನೆ 

ವಿಶ್ವ ವ್ಯಾಪಿಯೆ ಗುರು l ಗೋವಿಂದವಿಟ್ಠಲಾ ll 5 ll

***


No comments:

Post a Comment