Monday, 6 September 2021

ರಾಘವೇಂದ್ರರ ಚರಣವನು ತುತಿಪೆ ನಾ ರಾಘವೇಂದ್ರರನ್ನು ankita bheemesha vittala

  ankita ಭೀಮೇಶವಿಠಲ

ರಾಗ: [ನವರೋಜó] ತಾಳ: [ಆದಿ]


ರಾಘವೇಂದ್ರರಚರಣವನು ತುತಿಪೆ ನಾ

ರಾಘವೇಂದ್ರರನ್ನು ಜಾಗುಮಾಡದೆಲೆ

ಬಾಗಿ ನಮಿಸಿದವ ಭೋಗಿಯಾದುದನು ತಿಳಿದು


ಪ್ರತಿವರುಷದಿ ಬಂದತಿಹರುಷದಿ ನಿನ್ನ

ರಥವನೋಡಿ ಪಾಡಿದವಗೆ ಸುತರ ನೀಡಿ ಸಲಹುತಿಹ 1

ದರುಶನಮಾತ್ರದಿ ದುರಿತಗಳೆಲ್ಲವು ಹರವು

ಹರಿಯ ಕೃಪಾಸಾಗರಪಡೆದು ಮೆರೆದಿರುವ 2

ಕುಷ್ಟಾದಿ ವ್ಯಾಧಿಗಳಟ್ಟುತ ಭೀಮೇಶ

ವಿಠಲ ಕೀರುತಿಕೊಟ್ಟು ಒಲಿದಿರುವದರಿತು 3

***


No comments:

Post a Comment