Thursday, 12 December 2019

ಬಾರಯ್ಯ ಭಕ್ತವತ್ಸಲಾ ಬಾರೋ ಶ್ರೀಹರಿಗೋಪಾಲಾ ankita mahipati

ಭೈರವಿ ರಾಗ ತ್ರಿತಾಳ

ಬಾರಯ್ಯಾ ಭಕ್ತವತ್ಸಲಾ
ಬಾರೋ ಶ್ರೀಹರಿಗೋಪಾಲಾ
ಸಿರಿ ಸುಖಲೋಲಾ ||ಪ||

ಸಾಮಗಾಯನ ಪ್ರೀಯಾ
ಸಮಸ್ತ ಲೋಕದ ಶ್ರೇಯಾ
ನೇಮಿಸಿ ಬೀರೋ ಉದಯಾ
ಸ್ವಾಮೀ ನಮ್ಮಯ್ಯಾ ||೧||

ಅನಾಥರನುಕೂಲಾ
ಮುನಿಜನ ಪ್ರತಿಪಾಲಾ
ಘನಸುಖದ ಕಲ್ಲೋಳಾ
ದೀನದಯಾಳಾ ||೨||

ಮನಮಂದಿರದೊಳು
ಅನುವಾಗಿ ಬಾಳು
ದೀನ ಮಹಿಪತಿಗಾಳು
ಘನವಾಗಿ ಕೇಳು ||೩||
********

No comments:

Post a Comment