ಕಾಖಂಡಕಿ ಶ್ರೀ ಮಹಿಪತಿರಾಯರು
ಘನ ಲಂಪಟಗೆಲ್ಲಿಹುದು ಗುರುಕೃಪೆ ಜ್ಞಾನ ತನು ಲಂಪಟಗೆಲ್ಲಿಹುದು ತನ್ನೊಳು ಖೂನ ಪ
ವಿಷಯ ಲಂಪಟಗೆಲ್ಲಿಹುದು ತಾ ವಿರಕ್ತಿಯು ದೆಸೆಗೆಟ್ಟವಗೆಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವಂಗೆಲ್ಲಿಹುದು ಋಷಿ ಭಕ್ತಿಯು 1
ಮರುಳಗುಂಟೆ ಅರುಹ ರಾಜಸನ್ಮಾನದ ತರಳಗುಂಟೆ ಭಯವು ಘಟಸರ್ಪದ ಮೃಗ ಜಲವೆಂಬುವದ ಸೂರಿಗೆ ಉಂಟೆ ಮಾತು ಚಾತುರ್ಯದ 2
ಕನಸ ಕಾಂಬುವಗೆಲ್ಲಿಹುದು ತಾನಿರುವ ಸ್ಥಾನ ಮನದಿಚ್ಛೆಲಿದ್ದವಗೆಲ್ಲಿಯ ಧ್ಯಾನ ದೀನ ಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳ್ಳದೆ ಜನ್ಮಕ ಬಂದದ್ದೇನ 3
****
No comments:
Post a Comment