ಧ್ರುವತಾಳ
ಕಾಮ ಕಂಗೆಡಿಸುತಲಿದೆ
ಕ್ರೋಧ ಬಾಧಿಸುತಲಿದೆ
ಲೋಭ ಲೋಭನರಿಯದಿದೆ
ಮೋಹ ಮುದ ಹೀರುತಿದೆ
ಮದ ಮುಂದುಗೆಡಿಸುತಿದೆ
ಮತ್ಸರ ತುಚ್ಛಮಾಡುತಿದೆ
ದೇವ ಏನು ಮಾಡಲಿ ಸ್ವಾಮಿ
ದೇವ ನಾನೊಂದು ಬೇಡಿದರೆ
ನೀನೊಂದು ನೇಮಿಸಿ ನೋಡಿ ನಗುವೆ ಸ್ವಾಮಿ
ಬಡವನ್ನ ಬಿಡಲಾಗದು
ದೂರವೇನೋ ಸ್ವಾಮಿ ಒಡೆಯ
ಬಿಡಿಸಯ್ಯ ಹಗೆಗಳ ಕಾಟವ
ಕೊಡು ನಿನ್ನ ಭಕುತಿಸುಖವನು
ನಿನ್ನ ಭಕುತಜನರೊಡನಾಡಿಸು
ಅಚಲಾನಂದವಿಠಲ ಕರುಣಿ 1
ರೂಪಕತಾಳ
ಹೆಜ್ಜೆ ಹೆಜ್ಜೆಗೆ ಗೋವಿಂದ ಎನ್ನದೆ
ಲಜ್ಜೆಗೆಟ್ಟ ಪಾಪಿಗೆ ನಿತ್ಯನರಕ
ಲಜ್ಜೆಯನಳಿದು ಮಹಾತ್ಮರು ಹರಿ ಪಾ-
ದಾಬ್ಜದ ಮಕರಂದವನು ಭುಂಜಿಪರು
ಸಜ್ಜನಪ್ರಿಯ ಅಚಲಾನಂದವಿಠಲ
ಅರ್ಜುನಗೊಲಿದಂತೆ ಒಲಿವನು ಕಾಣಿರೊ 2
*
ಆರಾರ ಮನೆಗಳಿಗೆ ಹಾರೈಸಿ ಹೋದರೆ
ಆರೆನ್ನ ನುಡಿಸರು ಇತ್ತ ಬಾ ಎನ್ನರೊ
ಇಂತು ಸಾರುವೆ ಹರಿಯೆ ಸುತ್ತ ಮುತ್ತಿದ
ಸಂಸಾರಕ್ಕೆ ಎಲ್ಲರು ಇಂತು
ಸಾರುವೆ ಹರಿಯೆ ಕತ್ತಲೆಗವಿದ
ಕಣ್ಣು ಕಾಣದ ಮುಗುಧಂಗೆ
ಎತ್ತಲೈದಾನೋ ನಮ್ಮ ಅಚಲಾನಂದವಿಠಲ 3
ಜತೆ
ಎನ್ನವಗುಣಗಳಯೆಣಿಸಲಾಗದು ದೇವ ಈ ವ್ಯಾಳೆ ಕಾಯೊ
ಎನ್ನಮ್ಯಾಲೆ ಕೃಪೆ ಮಾಡೊ ಅಚಲಾನಂದವಿಠಲ **
* ತಾಳ ಹೇಳಿಲ್ಲ
** ಇದೊಂದು ಅಪೂರ್ಣ ಸುಳಾದಿ
***
No comments:
Post a Comment