ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿ ಸ್ವಾನಂದ ಮಹಿಮೆಯು ಏನೆಂದ್ಹೇಳಲಿ ಮಾ p
ವೇದಲ್ಲ ವಾದಲ್ಲ ಭೇದಮಾಡುವದಲ್ಲ ಸಾಧಕರಿಗೆ ತಾ ಸಿಲುಕುದುಮಾ ಓದಲ್ಲ ಶೋಧಲ್ಲ ಗಾದಿಯ ಮಾತಲ್ಲ ಭೇದಿಸಿದರೆ ತಾನು ತಿಳಿವದು ಮಾ 1
ಧ್ಯಾನಲ್ಲ ಮೋನಲ್ಲ ಸ್ನಾನ ಸಂಧ್ಯಾನಲ್ಲ ಙÁ್ಞನಹೀನರಿಗಿದು ತಿಳಿಯದು ಮಾ ನಾನಲ್ಲ ನೀನಲ್ಲ ನಾನುಡಿದ ಮಾತಲ್ಲ ಅನುಭವ ಸಿದ್ಧನು ಬಲ್ಲನು ಮಾ 2
ಸೇವಲ್ಲ ಸೂತ್ರಲ್ಲ ಬಾಹ್ಯನೋಟಿಕೆ ಅಲ್ಲ ಮಹಿಪತಿ ನಿನ್ನೊಳು ತಿಳಿವದು ಮಾ ಕೌತುಕವನು ಕಂಡು ಮಹಾ ಗುರುಕೃಪೆಯಿಂದ ಸಾಯೋಜ್ಯ ಸದ್ಗತಿ ಪಡೆವದು ಮಾ 3
***
No comments:
Post a Comment