Friday 27 December 2019

ಮೋದದಿ ನಿಮ್ಮಯ ಪಾದಕೆ ವಂದಿಪೆ ankita madhwesha krishna

ಶ್ರೀ  ಸತ್ಯ ಪ್ರಮೋದ ತೀರ್ಥರ ಸ್ಮರಣೆ

ಮೋದದಿ ನಿಮ್ಮಯ ಪಾದಕೆ ವಂದಿಪೆ
ಭೇದ ಮಾಡದಲೆ ಕಾಯೊ ಗುರುವೇ
ಸತ್ಯಪ್ರಮೋದ ಗುರುವೇ ನಿಮ್ಮಯ
ಭೃತ್ಯನಾಗಿಹೆ ನಾನು||ಪಲ್ಲ||

ಪಂಚ ದಶಕಗಳ  ರಾಮನ ಪೂಜಿಸಿ
ಪಂಚ ಭೇದ ತಾರತಮ್ಯವ ತಿಳಿಸಿ 
ಪಂಚೇಂದ್ರಿಯಗಳ ಸುಲುಭದಿ ಜಯಿಸಿ 
ಪಂಚಮುಖದ ಪ್ರಾಣೇಶನ ಸ್ತುತಿಸಿದ||೧||

ಹತ್ರಿರ ಬರುತಿಹ ಭಕ್ತರ ಸಲಹುತ
ನಿತ್ಯ ತೃಪ್ತಗೆ ನೈವೇದ್ಯವ ಮಾಡುತ
ಉತ್ತರೋತ್ತರ ರಾಮನ ಭಜಿಸಿ
ಉತ್ತರಾದಿಮಠವೆತ್ತರ ತರಿಸಿದಖ||೨||

ಮಧ್ವ ಮತದ ಸಿಧ್ಧಾಂತವ ತಿಳಿಸಿ 
ತತ್ವ ಮಾರ್ಗ ಸದಾಕಾಲ ಬೋಧಿಸಿ
ಮಧ್ವೇಶಕೃಷ್ಣನ  ನಿರಂತರ ಪೂಜಿಸಿ
ಮಧ್ವರಾಯರ ಕರುಣವ ಪಡೆದಿಹ||೩||
**********

No comments:

Post a Comment