Thursday, 5 August 2021

ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ ankita kamalanabha vittala

 ..


kruti by Nidaguruki Jeevubai


ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ

ಅಕ್ಷಯ ಗುಣಪೂರ್ಣ ಪಕ್ಷಿವಾಹನ ದೇವ

ಅಕ್ಷರೇಶಾತ್ಮಕ ಮೋಕ್ಷ ದಾತನೆ ಹರಿ ಪ


ರಕ್ಷಿಸೀಕ್ಷಣ ಲಕ್ಷ್ಮೀರಮಣ

ಈಕ್ಷಿಸೀಗಲೆ ರಕ್ಷಿಸೆಮ್ಮನು

ಕುಕ್ಷಿಯೊಳು ಜಗ ರಕ್ಷಿಸುವ ಹರಿ

ಸೂಕ್ಷ್ಮ ಸ್ಥೂಲದೊಳಿರುವ ದೇವ ಅ.ಪ


ಇಂದಿರೆರಮಣ ಗಜೇಂದ್ರವರದ ಹರಿ

ಮಂದಹಾಸದಿ ಭಕ್ತವೃಂದವ ಪಾಲಿಪ

ನಂದಕಂದನೆ ಬಂದು ರಕ್ಷಿಸು

ಇಂದಿರಾ ಭೂದೇವಿ ರಮಣನೆ

ಸುಂದರಾಂಗನೆ ಸುಮನ ಸರ ಹೃ-

ನ್ಮಂದಿರದಿ ಶೋಭಿಸುವ ದೇವ 1

ನಂದನಕಂದ ಮುಕುಂದ ಹರೇ ಕೃಷ್ಣ

ಕಂದರ್ಪ ಜನಕನೆ ಕರುಣಾನಿಧೆ ಹರಿ

ಮಂದರೋದ್ಧರ ಮದನ ಜನಕÀ

ಸುಂದರಾಂಗ ಶ್ರೀಸುಮನಸರ ಪ್ರಿಯ

ಬಂಧಮೋಚಕ ಭವವಿದೂರನೆ

ಸಿಂಧುಶಯನ ಸರ್ವೇಶ ಶ್ರೀಹರಿ 2


ಕನಕ ಗರ್ಭನ ಪಿತ ಕರುಣಿಸೊ ನಿನ್ನಧ್ಯಾನ

ಕನಸುಮನಸಲಿ ನಿನ್ನ ಸ್ಮರಣೆ ಎನಗಿತ್ತು

ಕನಲಿಕೆಯ ಕಳೆದೆಮ್ಮ ಕ್ಷಣ ಬೆಂ-

ಬಿಡದೆ ಕಾಪಾಡೆನ್ನುತ ಪ್ರಾರ್ಥಿಪೆ

ಕಮಲನಾಭವಿಠ್ಠಲನೆ ಕರುಣದಿಕಮಲ ಮುಖಿಯೊಡಗೂಡಿ ಹರುಷದಿ 3

***


No comments:

Post a Comment