..
kruti: tandevaradagopala vittala (ಪ್ರಹ್ಲಾದಗೌಡರು)
ಕಾಮನುಜ ಸುರಸೋಮ ಶತ್ರುವಿನಾಯಕ ಪರಿಪಾಲಿಸೊ ಪ
ಕಾಮ ಇಲ್ಲದ ಕಾಲ ಎನಗೊಂದು ಕ್ವಾರಿ ಕರಿಮುಖ ತೋರಿದಿ ನೀಅ.ಪ.
ಎಂದಿಗೂ ನಿನ್ನ ದ್ವಂದ್ವ ನಂಬಿದ ಕಂದನೆಂದು ಮುಂದೆ ಕರೆದು ಚಂದದಿಂದಲಿ ಬಿಂಬ ಬಿಂಬದೊಳಗಿಹ ಬಿಂಬ ಮೂರುತಿ ಪಾದ ಹೊಂದಿಸಿ 1
ಭಾಸದಿಂದಲಿ ವಿಷ ಧರಿಸಿ ಆ-ಭಾಸತನದಲಿ ದಾಸನೆನಿಸಿ ಕಾಸು ಕಾಸಿಗೆ ಮೋಸಹೋಗಿ ವಿಶೇಷ ಮಮಕರ ಪಾಶ ಕ್ಷಳಿಸಿದೆ 2
ಚಂದ್ರ ಧರಿಸುತ ಛಂದದಿಂದಲಿ ನಿನ್ನ ಸುಂದರ ಚಾರು ಚರಣವ ಬಂದು ತೋರಿ ಇಂದು ಪೊರೆಯೋಕಂಬುಕಂಧರ ಶಾಮಸುಂದರ ತಾತನೆನಿಸುವ ತಂದೆವರದಗೋಪಾಲವಿಠಲನ ಪ್ರೇಮ ಪಾತ್ರನೆ 3
***
No comments:
Post a Comment