Monday, 6 September 2021

ತುಂಗಾಸ್ನಾನ ಗುರುಗಳಧ್ಯಾನ ಮುಕ್ತಿಗೆ ಸೋಪಾನ ankita janakiramana

ankita janakiramana

ರಾಗ: ಧನ್ಯಾಸಿ ತಾಳ: ಆದಿ


ತುಂಗಾಸ್ನಾನ ಗುರುಗಳಧ್ಯಾನ ಮುಕ್ತಿಗೆ ಸೋಪಾನ


ತುಂಗಾ ತೀರದಿ ಶೋಭಿಪ ವರ 

ಮಂತ್ರಾಲಯವೇ ಇದಕೆ ಸ್ಥಾನ ಅ. ಪ


ಹರುಷದಿಬಂದು ನದಿಯಲಿಮಿಂದು 

ಗುರುದಯದಿಂದೆಂದೂ

ಮರೆಯೆವು ಈ ಆನಂದವನೆಂದೂ 

ಸಾರುವಭಕುತರೆ ಇದಕೆ ಸಾಕ್ಷಿ 1

ಪರಿಪರಿ ಕ್ಲೇಶಪಟ್ಟು ಬರುವ ಭಕುತರು

ವರಗಳಪಡೆವುದೇ ಸಾಕ್ಷಿ

ನಾರಸಿಂಹನ ದಿವ್ಯ ಭಕುತ ಶ್ರೀ

ಪ್ರಹ್ಲಾದರಿಲ್ಲಿರುವುದೇ ಇದಕೆ ಸಾಕ್ಷಿ 2

ದೀನಭಕುತರಾಭೀಷ್ಟವ ಸಲಿಸುವ

ಘನರಾಘವೇಂದ್ರರೇ ಸಾಕ್ಷಿ

ಜಾನಕಿರಮಣ ಶ್ರೀಮೂಲರಾಮನಿಲ್ಲಿ

ಅನುಪಮ ಸೇವೆಯಗೊಳ್ವುದೇ ಸಾಕ್ಷಿ 3

***


No comments:

Post a Comment