ಕಾಖಂಡಕಿ ಶ್ರೀ ಕೃಷ್ಣದಾಸರು
ಸುಡು ಸುಡು ಯಾತರ ಬುದ್ಧಿ ಹರಡುವ ಸಲ್ಲಾ ಪ
ಸಾಧುರ ಮಹುಮೆಯ ಕಂಡವರಂತೆ | ವಾದಿಸಿ ತಿರುಗುವದಲ್ಲಾ 1
ಕಾಗೆಯು ಕರ್ರಗೆ ರೂಪದಲ್ಲಿದ್ದರೆ | ಕೋಗಿಲೆವಾಗುವದಲ್ಲಾ 2
ಬಕ ಹಂಸನ ಪರಿಯಾದರ ಕ್ಷೀರೋ | ದಕ ಬೇರಾಗುವದಿಲ್ಲಾ 3
ನೌಲ ಕಂಡು ಹಕ್ಕಿಯು ಕುಣಿವಂತೆ | ಹೋಲಿಕಿ ಗುಣ ಬಿಡುಯಲ್ಲಾ 4
ಮಹಿಪತಿ ನಂದನು ಸಾರಿದ ನೆಚ್ಚರ | ಸ್ವಹಿತವ ಪಡೆಯಚ್ಚರಾ 5
***
No comments:
Post a Comment