Thursday 5 December 2019

ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ purandara vittala

ರಾಗ ಧನಶ್ರೀ ಅಟತಾಳ 

ಮಾಡಿದ ಎನ್ನ ಫಕೀರನು ಸದ್ಗುರು
ಮಾಡಿದ ಎನ್ನ ಫಕೀರ ||ಪ ||

ಅನುಭವ ಖಪ್ಪರಿ ಹೃದಯದ ಜೋಳಿಗೆ ಎನ್ನಯ ಕಂಕುಳಲಿಟ್ಟು
ಅನಿಮಿಷಧಟ್ಟಿ ಅರಗಿನ ರೊಟ್ಟಿ ಎನ್ನಯ ಕೈಯಲಿಟ್ಟ ||

ನಾದದ ತಂಬುರಿ ಮೋದಮಂದಾರವು ನಿಚ್ಚಂಗದ ಟೊಪ್ಪಿಗೆನಿಟ್ಟ
ಬೋಧದ ಭಂಗಿ ಅಮೃತದ ಲುಂಗಿ ಸಮಾನ ಗುಳಿಗೆಯನಿಟ್ಟ ||

ಈ ಪರಿ ಮಾಡಿ ಬಯಲನ ತೋರಿ ಕರವನು ನೆತ್ತಿಯಲಿಟ್ಟ
ಭೂಪ ಪುರಂದರವಿಟ್ಠಲರಾಯನು ತಿರುಗೆಂದಪ್ಪಣೆ ಕೊಟ್ಟ ||
***

pallavi

mADida enna phakIranu sadguru mADida enna bhakIra

caraNam 1

anubhava gappari hrdayada jOLige ennaya kanguLaliTTa
AmiSa dhaTTi aragina roTTi ennaya kaiyaliTTa

caraNam 2

nAdada tamburi mAdamandAravu niccangada ToppigeniTTa
bOdhada bhangi amrtada lungi samAna guLigeyaniTTa

caraNam 3

I pari mADi bayalana tOri karavanu nettiyaliTTa
bhUpa purandara viTTalarAyanu tirugendappaNe koTTa
***

No comments:

Post a Comment