Wednesday 1 September 2021

ದೇವಾಧಿ ದೇವನೀತ ಜೀವ ಪ್ರಾಣನಾಥ ಕಾವ ಕರುಣನೀತ ಹಂಸನಾಥ ankita mahipati

ದೇವಾಧಿ ದೇವನೀತ ಜೀವ ಪ್ರಾಣನಾಥ ಕಾವ ಕರುಣನೀತ ಹಂಸನಾಥ 1 

ದೇಶಿಕರ ದೇವ ಭಾಸಿ ಪಾಲಿಸುವ ವಾಸುದೇವ 2 

ಸ್ಮರಿಸುವರ ಜೀವ ಹರಿ ಪರಂ ದೈವ ಪರಮ ಭಕ್ತರಿಗೀವ ಹರುಷವ 3 

ಸಾಧು ಹೃದಯವಾಸ ಸದಮಲಾನಂದ ಘೋಷ ಸದೋದಿತ ಪ್ರಕಾಶ ಯಾದವೇಶ 4 

ಇಹಪರ ಸಾಹ್ಯನೀತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಅವಧೂತ 5

***


No comments:

Post a Comment