ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ
ಚಿಂತಿಸು ಮನವೆ ನಿರಂತರ ಶ್ರೀಮದ
ನಂತಗಿರಿಯಲಿ ನಿಂತು ಭಜಕರ
ಚಿಂತಿತಪ್ರದ ನಂತಶಯನನ ಅ.ಪ
ಶಾಂತ್ಯಾದಿ ಗುಣಭರಿತ ಮಹಂತ ಮುನಿ ಮಾ
ರ್ಕಾಂಡೇಯಗೊಲಿದು ಸತತ ಪರ್ವತದಿ ಲಕ್ಷ್ಮೀ
ಕಾಂತನೆಸುರ ಸಹಿತ ಸನ್ನಿಹಿತನೆನುತ ಕಂತುಹರನುತ
ನಂತ ಮಹಿಮನ ಸಂತಸದಿ ಸಂತುತಿಸುತಲಿ ತ-
ಮ್ಮಂತರಂಗದಿ ಚಿಂತಿ ಸುವರಘಧ್ವಾಂತ
ದಿನಕರಾನಂತ ದೇವನ 1
ನಾರ ಶಿಂಹನದರ್ಶನ ಕೊಳ್ಳುತಿರೆ ಮುನಿ ಬಲ
ದ್ವಾರದಿಂದಲಿ ಪ್ರತಿದಿನ ವಿರುತಿರೆ ಪ್ರಥಮ
ದ್ವಾದಶಿಯೊಳು ಸಾಧನ ತಕ್ಷಣ ಪ್ರಸನ್ನ
ಸೂರ್ಯಸುತನ ಉದಯದಲಿ ಭಾಗೀರಥಿಯು ಪು
ಷ್ಕರಣಿಯೊಳು ಬರೆ ಪಾರಿಜಾತದ ಭೂರುಹಂಗಳ
ಚಾರುರೂಪವ ತೋರಿದಾತನ 2
ನೀರಜಾಸನ ವಂದಿತ ಬಂಗಾರಮಕುಟ
ಕೇಯೂರ ಕಂಕಣ ಭೂಷಿತ ಚಕ್ರಾದಿ ಚಿನ್ಹಿತ
ಚಾರುಶಿಲೆಯೊಳು ಸನ್ನಿಹಿತ ಭಜಕರನು ಪೊರೆಯುತ
ವಾರವಾರಕೆ ಭಕುತಜನ ಪರಿವಾರದಿಂ ಸೇವೆಯನು ಕೊಳ್ಳುತ
ಧಾರುಣಿಯೊಳು ಮೆರೆವ ಕಾರ್ಪರ ನಾರಶಿಂಹಾತ್ಮಕ ಸ್ವರೂಪನ3
****
No comments:
Post a Comment