ಲೋಕನೀತಿಯ ಪದ
ಕೇಶವನ ದಾಸರಿಗೆ ಘಾಸಿಯುಂಟೆ
ವಾಸವನ ವಜ್ರಕೆ ಗಿರಿನಿಕರದಂಜಿPಯೆ ಪ
ಇದ್ದಲಿಯನು ಗೊರಲಿ ಮೆದ್ದು ಜೀವಿಪದುಂಟೆ
ಮದ್ದಾನೆಗಳಿ ಗಲ್ಪ ನರಿಯ ಭಯವೇ
ಅಬ್ದಗಳು ಮರುತನೊಳು ಯುದ್ಧ ಬಯಸುವದುಂಟೆ
ಸಿದ್ಧರಿಗೆ ಭವಪಾಶ ಪದ್ಧತಿಯು ಉಂಟೆ 1
ಗುರುಕೃಪೆಯ ಪಡೆದವಗೆ ಪರಸೌಖ್ಯ ತಪ್ಪದೇ
ಹರಿಯ ಸ್ಮರಿಸುವ ನರಗೆ ನರಕ ಭಯವೇ
ಸರಿಗಟ್ಟಿ ಉರಗ ನಭಚರನೆದುರಲ್ಲಿಪ್ಪದೆ
ನರಚಂಡಕರಕರ ಕಂಡು ಅರುಳುವುದೆ ಕುರುಕುಮುದಾ 2
ಮೇರುವಿಗೆ ಛಳಿ ಭಯವೇ
ವಾರಿಧಿಗೆ ಮಳಿ ಭಯವೇ
ಮಾರನ್ನ ಗೆದ್ದವಗೆ ನಾರಿ ಭಯವೇ
ತಾರಕಾ ಪ್ರೀಯ ಶಿರಿಗೋವಿಂದವಿಠಲಗೆ
ಸೇರಿರುವ ಶೂರರಿಗೆ ಆವ ಭಯವೈಯ್ಯಾ 3
***
No comments:
Post a Comment