Tuesday, 3 August 2021

ನಿನ್ನ ನೋಡಿದೆ ಕನ್ಯಕುಮಾರಿ ನಿನ್ನ ನೋಡಿದೆ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ನಿನ್ನ ನೋಡಿದೆ ಕನ್ಯಕುಮಾರಿ | ನಿನ್ನ ನೋಡಿದೆ

ಎನ್ನ ಪಾಪಗಳ ನೀಡ್ಯಾಡಿದೆ ಪ


ಹಿಮರಾಜಪುತ್ರಿ | ಹೇಮಾಭರಣಗಾತ್ರಿ

ಆ ಮಹಾ ಪವಿತ್ರಿ | ಆನಂದ ನೇತ್ರೆ 1


ಉಡುರಾಜನಂತೆ ತಿಲಕದಾಕಾಂತಿ

ನೋಡುತಾಲಿ ನಿಂತೆ | ಓಡುತಾಲಿ ಬಂದೆ 2


ಕೋಟಿಸೂರ್ಯಕಿಂತ ಮೇಟಿ ಆ ದಂಥ

ಮಾಟವಾದ ಮುಖವ ನೋಡುತ್ತಾ ನಿಂತೆ 3


ತಂದೆ ನಾರಸಿಂಹ ವಿಠಲನ್ನದಯದಿ

ಬಂದೆ ಈ ದಿನದಿ ನಿಂದು ಕರುಣಿಸಿದೆ 4

***


No comments:

Post a Comment