..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ
ಬಂದ ಜನರಿಗಿಷ್ಟವನೀವ ಕ್ಷೇತ್ರ
ವಾದಿರಾಜರು ವಾದದಿಂದ ವಾದಿಸಿ
ವೀರಶೈವರ ಗೆದ್ದ ಕ್ಷೇತ್ರ ಪ
ಒಂದು ಭಾಗದಿ ರೂಪ್ಯಪೀಠ ಮ-
ತ್ತೊಂದು ಭಾಗದಿ ಸೋದಾಕ್ಷೇತ್ರ
ಕುಂದು ಎಳ್ಳಷ್ಟಿಲ್ಲದೆ ತೋರ್ಪು
ದೆಂದು ಹರಿಭಕ್ತರಾದರಿಸುವರು 1
ಒಂದೇ ಸ್ಥಾನದಿ ಶ್ವೇತದ್ವೀಪ ಮತ್ತೆ
ವೈಕುಂಠನಂತಾಸನಗಳು
ಒಂದಾಗಿ ಶೋಭಿಸುತಿರುವ
ಚೆಂದವೇನೆಂದು ಪೇಳಲಿ ಮನವೆ 2
ರಾಜೇಶ ಹಯಮುಖ ಚರಣ
ಕಂಜ ಮಧುಪನಂತಿರುವ ಶ್ರೀಭಾವಿ-
ಕಂಜಜಾತನ ಪದಕರುಹ
ವಾದಿರಾಜರಾಯರ ದಿವ್ಯ ಕ್ಷೇತ್ರ 3
***
No comments:
Post a Comment