Wednesday, 1 September 2021

ಬಾರೋ ಬಾರೋ ರಂಗಾ ಬಾರೈಯ್ಯಾ ಯದುವೀರಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ರಾಗ -  :  ತಾಳ - 


ಬಾರೋ ಬಾರೋ ರಂಗಾ ll ಪ ll


ಬಾರೈಯಾ ಯದುವೀರಾ l ಈರೇಳು ಭುವನಾಧಾರಾ l

ಶ್ರೀ ರಮಣಿಯ ಮನೋಹರಾ l ವಾರಣ ಭಯ ನಿವಾರಾ l

ಕರುಣಾಕರಾ l ದೀನೋದ್ಧಾರಾ l ಸರ್ವಾಧಾರಾ l

ಪರಮ ಉದಾರಾ l ಸುರಸಹತಾರಾ l ದಯಾಸಾಗರ ll ೧ ll


ಯದುವಂಶಾಂಬುಧೀ ಸೋಮಾ l ಸದಾಮಲಾನಂದಾತ್ಮ ಒದಗುವೆ ಸ್ಮರಣೆಗೆ ನೇಮಾ l ಮದನಜನಕ ಮಹಮಹಿಮಾ l

ಜೀಮೂತ ಶಾಮಾ l

ಸದ್ಗುಣ ಧಾಮಾ l ಪೂರಿತ ಕಾಮಾ l

ತ್ರಿವಿಕ್ರಮಾ l ಅನಂತ ನಾಮಾ l ಲೋಕಾಭಿರಾಮಾ ll ೨ ll


ಅಸುರ ಕುಲ ಸಂಹರಣಾ l ಬಿಸರುಹ ಸಖ ಶತ ಕಿರಣಾ l

ಅಸಮನೆ ಮಹಿಪತಿ ಸುತನಾ l ಪೋಷಿಸುವೆ ನೀ ಪರಿಪೂರ್ಣ 

ಸರಸಿಜ ನಯನಾ l ಫಣಿವರ ಶಯನಾ l ಖಗವರ ಗಮನಾ l

ಮೃದುತರ ಚರಣಾ l ಅಹಲ್ಯೋದ್ಧರಣಾ l ಕನಕಾಭರಣಾ ll ೩ ll

***



ಬಾರೋ ಬಾರೋ ರಂಗಾ ಪ 


ಬಾರೈಯ್ಯಾ ಯದುವೀರಾ | ಈರೇಳು ಭುವನಾಧಾರಾ | ಶ್ರೀ ರಮಣಿಯ ಮನೋಹರಾ | ವಾರಣ ಭಯ ನಿವಾರಾ | ಕರುಣಾಕರಾ | ದೀನೋದ್ಧಾರಾ | ಸರ್ವಾಧಾರಾ | ಪರಮ ಉದಾರಾ | ಸುರಸಹತಾರಾ | ದಯಾಸಾಗರ 1 

ಒದಗುವೆ ಸ್ಮರಣೆಗೆ ನೇಮಾ | ಮದನಜನಕ ಮಹಮಹಿಮಾ | ಜೀಮೂತ ಶಾಮಾ | ಸದ್ಗುಣ ಧಾಮಾ | ಪೂರಿತ ಕಾಮಾ | ತ್ರಿವಿಕ್ರಮಾ | ಅನಂತ ನಾಮಾ | ಲೋಕಾಭಿರಾವi 2 

ಅಸುರ ಕುಲ ಸಂಹರಣಾ | ಬಿಸರುಹ ಸಖ ಶತ ಕಿರಣಾ | ಅಸಮನೆ ಮಹಿಪತಿ ಸುತನಾ | ಪೋಷಿಸುವೆ ನೀ ಪರಿಪೂರ್ಣ ಖಗವರ ಗಮನಾ | ಮೃದುತರ ಚರಣಾ | ಅಹಲ್ಯೋದ್ಧರಣಾ | ಕನPsÀರಣಾ 3

***


No comments:

Post a Comment