Friday 27 December 2019

ಆರುತಿಯನೆತ್ತಿರೆ ಅಚ್ಯುತನಿಗೆ ಅನಂತನಿಗೆ others

by ದಾಸರ ಲಕ್ಷ್ಮೀನಾರಾಯಣರಾಯರು
ಆರತಿಯನೆತ್ತಿರೆ  ಅಚ್ಯುತನಿಗೆ
ಅನಂತನಿಗೆ ಗೋವಿಂದನಿಗೆ ||ಪ||

ಕಾಲಾಂತರ್ಗತ ಕಾಲನಿಯಾಮಕ
ಕಾಲೋತ್ಪಾದಕ ಕಾಲಾತ್ಮನಿಗೆ ||೧||

ನೊಂದು ಕೌಂಡಿನ್ಯರು ಮುಂದೋರದಲಿರೆ
ಬಂದು ಕರವ ಪಿಡಿದಾನಂದವಿತ್ತಗೆ ||೨||

ಸಂತತ ನಡೆಯುವರಂತರ ಬಿಡಿಸುವ-
ನಂತಮಹಿಮ ಜಯವಂತ ಶ್ರೀಕಾಂತಗೆ ||೩||
********

No comments:

Post a Comment