Thursday 5 August 2021

ಮಂಗಳಾವೆನ್ನಿರೊ ಜಗಮಂಗಳ ನಾಯಕಗೆ ಶುಭ ಮಂಗಳಾ ankita gurutandevaradagopala vittala vadiraja stutih

 by ಗುರುತಂದೆವರದಗೋಪಾಲ ವಿಠಲ

ಮಂಗಳಾವೆನ್ನಿರೊ ಜಗಮಂಗಳ ನಾಯಕಗೆ ಶುಭ ಮಂಗಳಾ ಎನ್ನಿರೋ ಶುಭ ನಿಧಿಗೆ ಪ


ಮಂಗಳಾ ಗುರುವಾದಿರಾಜರಿಗೆ ಜಯಮಂಗಳಾ ಭಾವಿ ಮುಖ್ಯಪ್ರಾಣರಾಜನೀಗೆಅ.ಪ.


ಮಾಯಾವಾದಿಗಳಾ ಗೆದ್ದ ಸ್ವಾದಿಪುರವಾಸಿಯಾದ ವಾದಿರಾಜಾ ಮಧ್ವಮುನಿಗೆ ಜಯಮಂಗಳಾ 1

ಭೂತರಾಜಾರಿಂದ ಸೇವ್ಯಾಭೂತ ಪತಿಗೊಲಿದ ಗುರು ಲಾತವ್ಯ ರಾಜರಿಗೆ ಜಯಮಂಗಳಾ 2

ಧವಳಗಂಗಾವಾಸಿಯಾದ ಹಯಗ್ರೀವ ತ್ರಿವಿಕ್ರಮಾ ವೇದವ್ಯಾಸರ ಪೂಜಿಪಗೆ ಜಯಮಂಗಳಾ 3

ಹಂಸವಾಹನಾರೂಢರಾದ ಭಾವಿ ಭಾರತಿ ಪತಿ ರಮಣ ಹರಿಯಾ ಪ್ರಥಮಾಂಗ ಮುಖ್ಯಪ್ರತಿಬಿಂಬಾಣೆಗುರುತಂದೆವರದಗೋಪಾಲವಿಠ್ಠಲನಾ ವೀಹಾರಕ್ಕಾ-ವಾಸನಾದ ಸುವ್ರೇತಾ ಘನದೂತಾ ಗುರುವಾದಿರಾಜಗೆ 4

****


No comments:

Post a Comment