Wednesday, 1 September 2021

ಗುಹ್ಯ ಗುರುತವು ಪೂರ್ಣ ಸುಳ್ಹವುದೋರಿಕೊಡುವ ನಿಜ ಸದ್ಗುರು ಕರುಣ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಗುಹ್ಯ ಗುರುತವು ಪೂರ್ಣ ಸುಳ್ಹವುದೋರಿಕೊಡುವ ನಿಜ ಸದ್ಗುರು ಕರುಣ ಪ  


ಜೀವ ಶಿವ ದಾವ ದೆಂದಿಳಿವ್ಯಾವ ನೋಡಿ ನಾವು ನೀವೆಂದು ಹ್ಯಾವ ಹೆಮ್ಮೆಯ ಹಿಡಿಯ ಬ್ಯಾಡಿ ಮಾವಮಕರ ಗುಣಬಿಟ್ಟು ಭಾವ ಭಕ್ತಿ ಮಾಡಿ ದೇವದೇವೇಶನ ದಿವ್ಯಪಾದಪದ್ಮ ಕೂಡಿ 1 

ಬಾಯ್ದೆರೆದು ಬರೆ ಭ್ರಮೆಗೆ ಸಾಯಗೊಂಬುದು ಏನು ನ್ಯಾಯ ಜರೆದು ನೋಯಗೊಂಬುಪಾಯ ನಿನ್ನಾಧೀನ ಮಾಯ ಮರ್ಮಪಾಯವರಿದು ಧ್ಯಾಯಿಸೊ ನಿಧಾನ ಸೋಹ್ಯದೋರುತಿದೆ ನೋಡಿ ಸದ್ಗತಿ ಸಾಧನ 2 

ಸಾವಧಾನವೆಂದು ಶ್ರುತಿ ಸಾರುತಿದೆ ನೋಡಿ ಗೋವಿಸುವ ವಿದ್ಯದೊಳು ಸಿಲುಕಿಬೀಳಬ್ಯಾಡಿ ಆವ ಪರಿಯ ಭಾವ ಕಾವ ದೈವ ನೋಡಿ ಜೀವ ಜೀವಾಗಿಹ್ಯ ಮಹಿಪತಿ ನಿಜಗೂಡಿ 3

****


No comments:

Post a Comment