Wednesday, 1 September 2021

ಗುರುಸ್ತುತಿ ಬಾರಯ್ಯ ಗುಣನಿಧಿಯೆ ಗುರುಭಾನುಕೋಟ್ಯುದಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಗುರುಸ್ತುತಿ ಬಾರಯ್ಯ ಗುಣನಿಧಿಯೆ ಗುರುಭಾನುಕೋಟ್ಯುದಯ ಪ  


ಗುರುವರ ಶಿರೋಮಣಿಯೆ ಕರುಣಾನಂದ ಖಣಿಯೆ ಸುರತರು ಚಿಂತಾಮಣಿಯೆ 1 

ಸುಪಥದ ಸಾಧನಿಯೆ ಭಕ್ತಜನಭೂಷಣಿಯೆ ಜಗತ್ರಯ ಜೀವನಿಯೆ 2 

ಮಹಾನುಭವದ ಜಾಗ್ರತಿಯೆ ಮಹಿಮರ ಘನ ಸ್ಫೂರುತಿಯೆ ಮಹಿಪತಿ ಸ್ವಾಮಿ ಶ್ರೀಪತಿಯೆ ಸಹಕಾರ ಸುಮೂರುತಿಯೆ 3

***


No comments:

Post a Comment