Wednesday, 1 September 2021

ಇಂದು ಪವಮಾನ ಪಿಡಿಎನ್ನಕೈಯಾ ನಿನ್ನ ನಾ ಪೊಂದಿ ಪ್ರಾರ್ಥಪೆನಯ್ಯಾ ankita shyamasundara

 ..

ಇಂದು ಪವಮಾನ ಪಿಡಿಎನ್ನಕೈಯಾ ನಿನ್ನ ನಾ

ಪೊಂದಿ ಪ್ರಾರ್ಥಪೆನಯ್ಯಾ ಪ.


ಬಂಧನದೊಳು ನೊಂದೆನಯ್ಯ

ಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನ

ಕುಂದುಗಳೆಣಿಸದಿರಯ್ಯಾ ಗುರು

ಗಂಧವಾಹನ ವಜ್ರಕಾಯಾ ಅ.ಪ


ನಾನು ನನ್ನದು ಎಂಬ ಮದ ಬಿಡಿಸೊ

ಜ್ಞಾನ ಭಕ್ತಿ ವಿರಕ್ತಿ ಕೊಡಿಸೊ

ಜಾನಕಿಪತಿ ಪದದಿ ಮನ ನಿಲಿಸೊ

ಸಾನುರಾಗದಿ ಸತತ ಉದ್ಧರಿಸೊ 1


ನಿನ್ನ ದಯದಿಂ ರವಿಜ ಭಯ ಕಳೆದಾ

ನಿನ್ನ ವಲಿಮೆಲಿ ಪಾರ್ಥ ಜಯ ಪಡೆದಾ

ನಿನ್ನ ನಂಬದೆ ರಾವಣನು ತಾ ಮಡಿದಾ2


ಶ್ರೀಮದಾನಂದತೀರ್ಥ ಮಧ್ವೇಶಾ

ಶಾಮಸುಂದರ ಸ್ವಾಮಿ ನಿಜದಾಸಾ

ಕಾವಿತಾರ್ಥಗಳಿತ್ತು ಪೊರೆ ಅನಿ ಶಾ 3

***


No comments:

Post a Comment