Sunday, 1 August 2021

ಒಲ್ಲೆನೀ ಕವಚ ಕುಂಡಲಗಳನ್ನು ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಒಲ್ಲೆನೀ ಕವಚ ಕುಂಡಲಗಳನ್ನು

ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ಪ


ಹಗಲು ಹಾದರಗಿತ್ತಿಯಂತಿಪ್ಪ ಮನುಜನಿಗೆ

ಸೊಗಸುವುದು ಸೊಗಸದೆಂಬರುಹಿಲ್ಲದೇ

ಜಗದುದರ ನಿನ್ನಿಂದ ಶೋಭಿಸುವನಘ್ರ್ಯದ ವ

ಸ್ತುಗಳ ಎನಗೀಯಲೇತಕೆ ಮೆಚ್ಚಿದೆಯೋ ದೇವ 1


ನೋಡಲೆವೆ ಸೀವುದಿದನಿಟ್ಟು ಕೈಕೊಂಡ ಪ್ರಾಣ

ಗೂಡಿನೊಳಗಿಹುದೇ ಅಕಟಕಟ ಹರಿಯೇ

ಬೇಡವೀ ಮಾಯ ಕೃಪೆಯಿಂದ ಸದ್ಭಕುತಿಯ

ಜೋಡ ತೊಡಿಸಿದನೊಲ್ಲೆ ಕಾಡಬೇಡವೋ ದೇವ 2


ಶಿರಕೆ ಕರ್ಣಕೆ ಚರಣಗಳಿಗೆ ಕಥೆಯನ್ನು ಪೇ

ಳ್ದೆರಗುವುದನೊಲಿದು ಕುಣಿದಾಡುವುದನು

ಕರುಣಿಪುದು ಕವಚ ಕುಂಡಲ ಕಿರೀಟಗಳನು

ವರ ಪಾದುಕೆಗಳ ನಾನೊಲ್ಲೆ ಹರಿಯೇ 3


ನಿನ್ನ ದಾಸಾನುದಾಸ ದಾಸರ ಗುಣಾರ್ಣವದೊ

ಳೆನ್ನೊಳೆಳ್ಳನಿತುಂಟೆ ಅಕಟಕಟ ಹರಿಯೇ

ಬನ್ನಬಡಿಸಲು ಬೇಡ ದಕ್ಕದೀಯುಡುಗೊರೆಯು

ಚುನ್ನವಾಡುವರು ಧಾತ್ರಿಯ ಮನುಜರೆಲೆ ದೇವ 4


ಇದನು ಕೊಡಬೇಕಾದಡೆಯು ಮುಕ್ತ್ಯಾಂಗನೆಯ

ಮದುವೆಯನು ಮಾಡಿ ಯಾಬಳಿಕನಿತ

ವೊದವಿಸುವುದುಚಿತ ಒಪ್ಪಂದವಾಗಿಹುದು

ಚದುರ ವೈಕುಂಠ ವೇಲಾಪುರಾಧೀಶ 5

***


No comments:

Post a Comment