Sunday, 1 August 2021

ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷಶಾಯಿಯೆ ನಾ ಕಾಣದೇ ಮಾಡಿದ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷ

ಶಾಯಿಯೆ ನಾ ಕಾಣದೇ ಮಾಡಿದ ದುಷ್ಕರ್ಮಂಗಳಿಗೆ ಪ


ತಿರುಮಲೆಯಂತೆ ನಾ ಮಂಚದುರುಗನಿಂಬುಗೊಂಡು ಕ

ರ್ಪುರದ ವೀಳಯದ ಮಡುಪುಗಳನೇ ಕೊಟ್ಟು

ಮರಳಿ ನಿದ್ರೆಯ ಮಾಡುವಾ ಪರಿಯಂತ ಕಾಲನೊತ್ತುತ

ಲಿರುತಿರ್ದು ಪರಿದು ಎನ್ನ ನೆರೆಪಾತಕನಾಗಿ ಮಾಡಿದುದಕೇ 1


ಕಡಲಶಯನ[ನ]ನೇಕ ಕೋಟಿ ಕಮಲಭವಾಂಡ

ಕೊಡೆಯನೆ ಕಾಮಪಿತನೇ ಸರ್ವೋತ್ತಮನೇ ನಾ

ಕುಡಿದು ಮಿಕ್ಕ ಹಾಲ ನೀ ಕುಡಿದು ಯೆನ್ನಾ ಪಾಪದೊಳು

ಕೆಡಹಿ ಬಹಳ ಯಾತನೆ ಬಡಿಸೀ ಕೆಡಿಸಿದುದಕೇ 2


ಗುರುಶಿಷ್ಯರುಗಳು ಸ್ವಾಮಿ ಭೃತ್ಯರುಗಳು ದಂಪತಿಗಳೆಂಬೀ

ಪರಿಯ ತಾರತಮ್ಯಂಗಳೊಂದಿಲ್ಲವೇ ಹರೀ

ಶರಣವತ್ಸಲನೇ ವೇಲಾಪುರದ ವೈಕುಂಠಕೇಶವ

ನರನ ಪಾಮರನ ದುರಿತಶರಧಿಯ ದಾಂಟಿಸುವುದಕೇ 3

***


No comments:

Post a Comment