Wednesday, 1 September 2021

ಭಾರತೀ ಗುರುವರ ಗುರುಮಾರುತಿ ಕರುಣಿಸೊ ಸಾರಿದೆ ತವ ಪದ ಸಾರಸವ ankita shyamasundara

..

ಭಾರತಿ ಗುರುವರ ಗುರುಮಾರುತಿ ಕರುಣಿಸೊ

ಸಾರಿದೆ ತವ ಪದ ಸಾರಸವ ಪ


ದಾಶರಧಿಗೆ ನಿಜ ದಾಸನೆನಿಸಿ | ಕಮಲಾ

ಸನ ಪದವಿಯ ಪೊಂದಿದ್ಯೋ ನೀ

ಭೂಸುತೆ ಚೋರನ ಭಾಸುರ ಪುರವ ಹು

ತಾಶನಿಗುಣಿಸಿದ ಕೀಶ ನಮೋ 1


ಪುನಃ ದ್ವಾಪರದಲಿ ಜನಿಸಿ ಧ

ರ್ಮಾನುಜನೆನಿಸಿ | ಭೂಭಾರ

ದನುಜರ ರಣದಿ ಹೂಂಕಾರದಿ ಕುಣಿದು ಹರಿ

ಮನ ಘನ ಮೆಚ್ಚಿಸಿದ ಭೀಮ ನಮೋ 2


ಶ್ರೀಮದಾನಂದ ಮುನಿ ನಾಮದಿ ಪರಾತ್ವರ

ಶಾಮಸುಂದರನೆಂದು ಸ್ಥಾಪಿಸಿದಿ

ನೇಮದಿ ಭಜಪರ ಕಾಮಿತ ಗರಿಯುವ

ಗ್ರಾಮ ಬಲ್ಲಟಗಿ ಧಾಮ ನಮೋ 3

***

 

No comments:

Post a Comment