Tuesday, 27 July 2021

ಲಂಬೋಧರನೇ ನಿನ್ನನೇ ನಂಬಿದೆನೋ ಇಂದೇ ಮುಂದೆ ankita parthasarathi vittala

ಲಂಬೋಧರನೇ ನಿನ್ನನೇ ನಂಬಿದೆನೋ

ಇಂದೇ ಮುಂದೆ ಬಂದೆನ್ನ ಕಾಯೋ

ಸಿದ್ದಿ ವಿನಾಯಕ ವಿದ್ಯೆಯ ನೀಡಿ

ಉದ್ದರಿಸೆನ್ನನು ನೀ ಪೊರೆಯೋ ||1||


ವಿಶಿಷ್ಟ ವದನನೇ ವಿಘ್ನುವಿದೂರನೇ

ವಿಶ್ವ ಪರೇಶನೇ ಪೊರೆಯೆನ್ನನು

ಅಂಬಿಕಾ ತನಯನೆ ನಂಬಿದೆ ನಿನ್ನನು

ಬೆಂಬಿಡದೆಲೇ ನೀನು ಪೊರೆಯೆನ್ನನು ||2||


ಆಕಾಶವ್ಯಾಪ್ತನೇ ಭಕುತಿಗೆ ಪ್ರಾಪ್ತಾನೆ

ಪ್ರಾರ್ಥಿಪ ಜನರಿಗತಿಪ್ರೀತನೆ

ಪಾರ್ಥಸಾರಥಿ ವಿಠ್ಠಲನ ನಿಜಮಂದಿರ

ಕಾಣುವ  ಅನುಗ್ರಹ ಮಾಡುತ ಪೊರೆಯುವನೇ ||3||

***


lambodharane ninnane nambideno


inde munde bandenna kayo


siddi vinayaka vidyeya needi


uddarisennanu nee poreyo ||1||


vishista vadanane vignavidurane


vishwa pareshane poreyennanu


ambika tanayane nambide ninnanu


bembidadele neenu poreyennanu ||2||


akashavyapthane bhakuthige prapthane


prathipa janarigatipreethane


parthasarati vittalana nijamandira


kanuva anugraha madutha poreyuvane || 3||

***



No comments:

Post a Comment