Friday, 6 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ವಾನರೇಂದ್ರನ ರೂಪವ purandara vittala

ರಾಗ ಮುಖಾರಿ ಅಟತಾಳ 

ಜಯಮಂಗಳಂ ನಿತ್ಯ ಶುಭಮಂಗಳಂ ||ಪ||

ವಾನರೇಂದ್ರನ ರೂಪವ ತಾಳಿದ
ವನಧಿಯ ದಾಟಿ ಜಾನಕಿಗುಂಗುರವಿತ್ತ
ದಾನವೇಂದ್ರನ ವನವನೆಲ್ಲವ ಕಿತ್ತು ಪಟ್ಟಣವನೆ ಸುಟ್ಟು
ಇನಕುಲದ ರಾಮಗೆರಗಿದ್ಹನುಮಂತಗೆ ||

ದುಷ್ಟದುರ್ಯೋಧನನ ಮಡುಹಿ
ಜ್ಯೇಷ್ಠಗೆ ಪಟ್ಟಗಟ್ಟಿ ಅವನಿಯೊಳು ಮೆರೆದವನಿಗೆ
ದುಷ್ಟರಾಯರನೆಲ್ಲ ಮಡುಹಿದಖಿಳೇಶ್ವರನ
ಕೃಷ್ಣಗತಿಪ್ರಿಯನಾದ ಭೀಮಸೇನಗೆ ||

ಯತಿರೂಪವ ತಾಳಿ ಶ್ರುತಿಶಾಸ್ತ್ರದಿಂ ಶ್ರೀ-
ಪತಿಯು ಸರ್ವೋತ್ತಮನೆಂದೆನಿಸಿದವಗೆ
ಯತಿವೇದವ್ಯಾಸನಾದ ಪುರಂದರವಿಠಲನ್ನ
ಗತಿ ಮಾರ್ಗವ ತೋರಿದ ಮಧ್ವಮುನಿಗೆ ||
*******

No comments:

Post a Comment