Wednesday, 1 September 2021

ಎನ್ನನುದ್ಧರಿಸಲು ಘನ್ನ ಬಿರುದುಗಳು ಇನ್ನು ಉನ್ನತವಾಹವು ಕೇಳೊ ಹರಿಯೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಎನ್ನನುದ್ಧರಿಸಲು ಘನ್ನ ಬಿರುದುಗಳು ಪ


ಇನ್ನು ಉನ್ನತವಾಹವು ಕೇಳೊ ಹರಿಯೆ ಅ.ಪ


ಅನವರತದಿ ದುರ್ವಿಷಯ ಲಂಪಟದೊಳು

ಚನ್ನಾಗಿ ಪತಿತ ಎನ್ನಂತಜಾಮಿಳನೆ

ಇನ್ನಿದು ತಿಳಿದು ನೀ ಎನ್ನ ಪೂತನ ಮಾಡೆ

ನಿನ್ನನಿಮಿತ್ತ ಬಂಧುತನವೆ ವೆಗ್ಗಳವೊ 1


ಮನ್ನಿಸಿದವನಲ್ಲ ಪೂಜಿಸಲಿಲ್ಲ

ತನ್ನ ಸಂಬಂಧಿಯು ಮೊದಲಿಗನಲ್ಲ

ಎನ್ನಂತೆ ಗಜೇಂದ್ರನೆ ಎನ್ನನುದ್ಧರಿಸಲು

ನಿನ್ನ ಪತಿತಪಾವನತೆ ಘನ್ನವೊ 2


ಏಸಪರಾಧ ಮಾಡಿದ ಚೈದ್ಯಾದಿಗಳು

ಈಸಪರಾಧ ರಾಶಿಗಳ ಮಾಡಿದರೆ

ವಾಸುದೇವವಿಠಲ ಎನ್ನ ರಕ್ಷಿಸಲು

ಸೂಸುವುದೋ ನಿನ್ನ ಭಕುತ ವಾತ್ಸಲ್ಯತನವೊ 3

***


No comments:

Post a Comment