Thursday 5 August 2021

ಬಾರೋ ಬೇಗ ತೋರೋ ಮುಖವನು ನಿನ್ನ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಬಾರೋ ಬೇಗ ತೋರೋ ಮುಖವನು ನಿನ್ನ

ಬಾರಿಗೆ ಬಿದ್ದೆನು ಪಾರಗಾಣಿಸೊ ಪ


ಅಂಗಜನಯ್ಯಾ ಭುಜಂಗ ಶಯನಾ ಶ್ರೀ

ರಂಗ ಎನ್ನಾ ಅಂತರಂಗಕ್ಕೆ ನೀ 1


ಕಂಜಲೋಚನ ನಾ ನಿನಗಂಜಲಿ ಮುಗಿಯುವೆ

ಕುಂಜರೇಶ ವರದ ಭುಜಂಗ ಶಯನ2


ಘನ್ನಮಹಿಮ ಸನ್ಮತಿಯ ಪಾಲಿಸು ಪ್ರ

ಸನ್ನ ಪ್ರಾಣನಾಥ ವಿಠಲರಾಯನೆ 3

***


No comments:

Post a Comment