Saturday 4 December 2021

ಗುರುರಾಜ ಗುರು ಸಾರ್ವಭೌಮ ankita gurujagannatha vittala GURURAJA GURU SAARVABHOWMA



check this also - 

similar one

 ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ ankita gurujagannatha vittala GURURAJA GURUSAARVABHOWMA NINNAYA PAADA


ಗುರುರಾಜಾ ಗುರು ಸಾರ್ವಭೌಮ ಪ


ಗುರುರಾಜಾ ಗುರಸಾರ್ವಭೌಮ ನಿನ್ನಯ ಪಾದ

ಸರಸಿಜಯುಗಕಭಿ ನಮಿಸುವೇ ಅ.ಪ


ಕರುಣ ಸಾಗರನೆಂದು ಚರಣವ ನಂಬಿದೆ

ಶರಣನ ಪಾಲಿಸು ಕರುಣಿಯೇ 1


ಅನ್ಯರ ಭಜಿಸದೆ ನಿನ್ನನ್ನೆ ಭಜಿಸುವೆ

ಎನ್ನ ಮರೆವೊದಿದು ನ್ಯಾಯವೇ 2


ಪರಮ ಪುರುಷನೆ ನಿನ್ನನು ಚರನೆನಿಸಿ ಧರೆಯೋಳು

ನರರÀನ್ನ ಬೇಡೊದು ಘನತೆಯೆ 3


ಸುರನು ಮನೆಯಲ್ಲಿ ಸ್ಥಿರವಾಗಿ ಇರಲಿನು

ತಿರಕ ತಕ್ರಕೆ ಬಾಯಿ ತೆರೆವೋರೇ 4


ಬೇಡಿದ ಮನೋರಥ ನೀಡುವ - ನೀನಿರೆ

ಬೇಡೆನೆ ನರರನ್ನ ನೀಡೆಂದೂ 5


ಸಂತತ ಎನ ಕಾರ್ಯ ವಂತರಿಲ್ಲದೆ ನೀ -

ನಿಂತು ಮಾಡುವದು ಪುಶಿಯಲ್ಲ 6


ಕಾಲಕ್ಕೆ ಸುಖದುಃಖ - ಮೇಲಾಗಿ ಬರುತಿರೆ

ಪೇಳಿ ಎನ್ನನು ನೀ ಪಾಲಿಸುವಿ 7


ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ

ಉನ್ನತ ಸುಖದೊಳಗಿರುವರೋ 8


ನಿನ್ನ ಸೇವಿಸಿ ಭವ - ಬನ್ನ ಬಡುವದಿದು

ಎನ್ನಪರಾಧವದೇನಯ್ಯಾ 9


ಕುಚ್ಛಿತ ಜನರನ್ನ - ತುಚ್ಛ ಮಾಡದÀಲವರ

ಇಚ್ಛೆಕಾರ್ಯವ ಮಾಡಿ ಸಲಿಸುವಿ 10


ಜನನಿ ಪುತ್ರಗೆ ವಿಷsÀ - ವಿನಯದಿ ನೀಡಲು

ಜನಕ ತನಯನ ತಾ ಮಾರಲು 11


ವಸುಧೀಶ ವೃತ್ತಿಯ - ಕಸಕೊಂಡ ವಾರ್ತೆಯ

ವ್ಯಸನದಿ ಆರಿಗೆ ಉಸರೋದೋ12


ಇದರಂತೆ ನೀ ಮಾಡು - ವದು ಏನು ನ್ಯಾಯವೊ

ಪದುಮನಾಭನ ಪ್ರಿಯ ಗುರುರಾಯ 13


ಮೂಕ ಬಧಿರ ಕುರುಡಾ - ನೇಕ ಜನಕೆ ಕಾರ್ಯವಿ -

ವೇಕ ಮಾಡಿ ನೀ ಸಲಹಿದಿ 14


ಬಂದು ಬೇಡಿದ - ಮಹ - ವಂಧ್ಯಜನರಿಗೆ ಸು -

ಕಂದರ ನೀನಿತ್ತು ಸಲಹುವೀ 15


ಭೂತಾದಿ ಬಾಧವ - ನೀತರಿದು ಸುಖಗಳ

ವ್ರಾತವ ಸಲಿಸೀ ಪಾಲಿಸುವಿ 16


ಹಿಂದಿನ ಮಹಿಮ - ದಿಂದೇನು ಎನಗಯ್ಯ

ಇಂದು ಮಹಾ ಮಹಿಮೆ - ತೋರಿಸೋ 17


ನಾಥನು ನೀನಲ್ಲೆ ದೂತನು ನಾನಲ್ಲೆ

ಯಾತಕೆ ಈ ತೆರ ಮಾಡಿದೀ 18


ಎಲ್ಲೆಲ್ಲಿ ನಾ ಪೋದ - ರಲ್ಲಲ್ಲೆ ನೀ ಬಂದು

ಎಲ್ಲ ಕಾರ್ಯಗಳನ್ನು ಮಾಡಿದೀ 19


ಇತರರಿಗಸಾಧ್ಯ ಅತಿಶಯ ಚರ್ಯವ

ಯತನಿಲ್ಲದಲೆ ನೀ ಮಾಡಿದಿ 20


ಪೇಳಲೆನ್ನೋಶವಲ್ಲ ಭಾಳ - ನಿನ್ನಯ ಚರ್ಯ

ಕೀಳುಮಾನವ ನಾ ಬಲ್ಲೇನೆ 21


ಜ್ಞಾನಿಗಳರಸನೆ ಮೌನಿ ಶಿರೋಮಣಿ

ಧ್ಯಾನವ ಸಂತತ ನೀಡಯ್ಯಾ 22


ಸಂತತ ಎನ ಮನೊ - ಅಂತರದಲಿ ನೀ

ನಿಂತು ಪಾಲಿಸೊ ಎನ್ನ ಮಹರಾಯಾ 23


ಎಂತೆಂಥ ಭಯ - ಬರೆ - ನಿಂತು ತಳೆದ್ಯೊ ದಯ -

ವಂತ ನಿನಗೆಣೆಗಾಣೆನಯ್ಯಾ 24


ನಿನ್ನಲ್ಲಿ ಹರಿ ದಯ - ಉನ್ನತ ಇರಲಿನ್ನು

ಎನ್ನಲ್ಲಿ ನಿನ ದಯ ಇರಲಯ್ಯ 25


ದಾತಗುರು ಜಗನ್ನಾಥ ವಿಠಲ ನಿನ್ನ

ಮಾತು ಲಾಲಿಸಿದಂತೆ ಪೊರೆ ಎನ್ನಾ 26

***

pallavi

gururAja guru sAravabhauma

anupallavi

gururAja guru sArvabhauma ninnaya pAda sarasija yugagabhi namisuve

caraNam 1

karuNA sAgaranendu caraNava nanvuidE sharaNana pAlisO karuNIya
anyara bhajisade ninnane bhajisuve enna marayOdiddu nyAyavE

caraNam 2

ninna sEviparige innuNTe bhaya shOka unnanta sukhadoLage iruvarO
ninna sEvisi bhava vanna paduvadiddu enna aparAdavEnayya

caraNam 3

hindina mahimadinda Enu enageyya indu mahamihimE tOrisO
nAtanu ninnalle dUtanu nAnallE yAtakkE I tara mADidi

caraNam 4

jnyAnigaLarasane mauni shirOmaNi dhyAnava santata nIDayya
santata enamanO antaradali nintu pAlisu enna mahArAyA

caraNam 5

ninnalli haridaya innanta iralinnu ennalli ninna daya irali ayyA
dAta guru jagannAtha viThala n inna mAtu lAlisidantE poreyennA
***

ಗುರುರಾಜಾ ಗುರು ಸಾರ್ವಭೌಮ ||pa||

ಗುರುರಾಜಾ ಗುರಸಾರ್ವಭೌಮ ನಿನ್ನಯ ಪಾದ
ಸರಸಿಜಯುಗಕಭಿ ನಮಿಸುವೇ ||a.pa||

ಕರುಣ ಸಾಗರನೆಂದು ಚರಣವ ನಂಬಿದೆ
ಶರಣನ ಪಾಲಿಸು ಕರುಣಿಯೇ ||1||

ಅನ್ಯರ ಭಜಿಸದೆ ನಿನ್ನನ್ನೆ ಭಜಿಸುವೆ
ಎನ್ನ ಮರೆವೊದಿದು ನ್ಯಾಯವೇ ||2||

ಬೇಡಿದ ಮನೋರಥ ನೀಡುವ – ನೀನಿರೆ
ಬೇಡೆನೆ ನರರನ್ನ ನೀಡೆಂದೂ ||3||

ಜ್ಞಾನಿ ಗಳರಸನೆ ಮೌನಿ ಶಿರೋಮಣಿ
ಧ್ಯಾನವ ಸಂತತ ನೀಡಯ್ಯಾ ||4||

ಸಂತತ ಎನ ಮನೊ – ಅಂತರದಲಿ ನೀ
ನಿಂತು ಪಾಲಿಸೊ ಎನ್ನ ಮಹರಾಯಾ ||5||

ನಿನ್ನಲ್ಲಿ ಹರಿ ದಯ – ಉನ್ನತ ಇರಲಿನ್ನು
ಎನ್ನಲ್ಲಿ ನಿನ ದಯ ಇರಲಯ್ಯ ||6||

ದಾತಗುರು ಜಗನ್ನಾಥ ವಿಠಲ ನಿನ್ನ
ಮಾತು ಲಾಲಿಸಿದಂತೆ ಪೊರೆ ಎನ್ನಾ ||7||
***




No comments:

Post a Comment