Thursday 5 August 2021

ಹರಿಬಂದ ನರಹರಿ ಬಂದ ಕರಿಯ ಮೋಚಿಸಿದ ಸಿರಿವರ ಬಂದ ankita rajesha hayamukha

..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಹರಿ ಬಂದ ನರಹರಿ ಬಂದ

ಕರಿಯ ಮೋಚಿಸಿದ ಸಿರಿವರ ಬಂದ ಪ


ದೇವ ಬಂದ ಪಾಂಡವರ ಭಾವ ಬಂದ

ಗೋವುಗಳ ಕಾವ ಕೃಪಾಸಿಂಧು ಬಂದ 1


ಖ್ಯಾತ ಬಂದ ಪಾರ್ಥಸೂತ ಬಂದ

ವಾತಸುತ ಭೀಮಸೇನಪ್ರಿಯ ಬಂದ 2


ಮುನಿ ಬಂದ ಜಾಮದಗ್ನ್ಯ ಬಂದ

ಭಾನುಕೋಟಿಸುಪ್ರಕಾಶ ವ್ಯಾಸ ಬಂದ 3


ರಾಜ ಬಂದ ದಶರಥಸುತ ಬಂದ |

ತೇಜಿಯೇರಿ ಮೆರೆದ ಕಲ್ಕಿದೇವ ಬಂದ 4


ಶ್ರೀಶ ಬಂದ ಮಹಿದಾಸ ಬಂದ

ಭಾಸುರಾಂಗ ದೇವ ಶ್ರೀನಿವಾಸ ಬಂದ 5


ನೀಲ ಬಂದ ಬಾಲಕೃಷ್ಣ ಬಂದ

ಬಾಲಧ್ರುವರಾಯಗೊಲಿದ ರಂಗ ಬಂದ 6


ಕೋಲ ಬಂದ ಬಲಭದ್ರನ ತಮ್ಮ ಬಂದ

ರಾಜೇಶ ಶ್ರೀಹಯಮುಖ ದೇವ ಬಂದ 7

***



No comments:

Post a Comment