Monday, 6 September 2021

ಧನ್ಯನಾದೆ ನಾ ಗುರುರಾಜರ ನೋಡಿ ankita shreeshakeshava

 ankita ಶ್ರೀಶಕೇಶವ 

ರಾಗ: ನೀಲಾಂಬರಿ ತಾಳ: ಆದಿ


ಧನ್ಯನಾದೆ ನಾ ಗುರುರಾಜರ ನೋಡಿ 


ಸನ್ನುತಾಂಗ ಗುರುರಾಜರ ನೋಡಿ  ಅ.ಪ


ಘನ್ನಮಹಿಮರಿವರು ವರಪಾವನ್ನಚರಿತರಿವರು 

ಮುನ್ನ ಮಾಡಿದಪರಾಧಗಳೆಣಿಸದೆ ಉನ್ನತ ಸುಖಗಳನೀವರ ನೋಡಿ  1

ಬುಧರ ಮಹಾತ್ಪ್ರಭುವೋ ಭಜಿಪರ ಮಧುರ ಸುರದ್ರುಮವೋ

ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು

ಅಧಮರ ಮುರಿದಿಹ ಧೀರರ ನೋಡಿ  2

ಶ್ರೀಶಕೇಶವನ್ನ ಮನದೊಳುಪಾಸನೆಗೈವರನು 

ಭಾಸುರಾಂಗಯತಿ ರಾಘವೇಂದ್ರರನು 

ಈ ಸಮಯದಿ ಕೊಂಡಾಡುತ ನೋಡಿ  3

***


No comments:

Post a Comment