Wednesday 1 September 2021

ನೀರೇ ತೋರೇ ಪಯೋನಿಧಿ ವಾಸನಾ ನೀರ ಜಾಸನಾನಂತ ಸರ್ವೇಶನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೀರೇ ತೋರೇ ಪಯೋನಿಧಿ ವಾಸನಾ| ನೀರ ಜಾಸನಾನಂತ ಸರ್ವೇಶನಾ ಪ 


ಹಸ್ತ ವರದನ ಹರಿಮಧುಸೂದನ| ಹಸ್ತಿ ವಾಹಜನ ಸೂತಾದನಾ 1 

ಕರಿಯೇರಿದಾತನ ಶರಕುರುವಾತನ| ಕರಿಹರ ಸಖ ಸನಾತನಾ 2 

ಅನಂತ ಮಹಿಮ ಕೇಶವ ಮುಕುಂದನ| ಅನಂತ ಶಯನ ಗೋವಿಂದನಾ 3 

ಮಕರ ಧ್ವಜ ಪಿತನ ಪರಮಾನಂದನ| ಮಕರ ಧ್ವಜ ಪಿತ ವಂದ್ಯನಾ4 

ತಂದೆ ಮಹಿಪತಿ ನಂದನ ಜೀವನ| ಹೊಂದಿದವರ ಕಾವಾ ದೇವನಾ5

****


No comments:

Post a Comment