Tuesday 1 June 2021

ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ankita hanumesha vittala

ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ಪ


ಸದ್ಗುಣಭರಿತನೇ ದುರ್ಗುಣರಹಿತನೇ ವಿಘ್ನವಿನಾಶಕನೇ

ಭಗ್ನಗೈಸೋ ಎನ್ನ ಅವಗುಣಗಳ ನೀ ವಿದ್ಯಾದಾಯಕನೇ 1


ಶ್ರೀಶನಂಘ್ರಿಸರೋಜಭೃಂಗ ಮಹೇಶನ ವರಸುತನೇ

ವ್ಯಾಸಕರುಣಾಪಾತ್ರನೇ ಮನದಾಸೆ ಪೂರೈಸುವವನೇ 2


ಪಾಶಪಾಣಿಯೆ ಪ್ರಾರ್ಥಿಸುವೆ ನೀ ಲೇಸು ಕೊಡುವುದಿನ್ನಾ

ಶ್ರೀಶ ಶ್ರೀ ಹನುಮೇಶವಿಠಲನ ದಾಸನೇ ಅನುದಿನಾ 3

****


No comments:

Post a Comment