Thursday, 5 August 2021

ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ ಅನುದಿನವು ಶ್ರೀ ಹರಿಯ ankita kamalanabha vittala

..

kruti by Nidaguruki Jeevubai


ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ

ಅನುದಿನವು ಶ್ರೀ ಹರಿಯ ಸ್ಮರಣೆ ಮರೆಯದಂತೆ ಪ


ತಂದೆ ತಾಯಿ ನೀನೆಂದು ನಂಬಿದೆನೊ

ಬಂಧ ಬಿಡಿಸಿ ಕಾಯೋ ತಂದೆ ಹನುಮವೀರ 1

ದುರುಳ ದೈತ್ಯನಾದ ಜರೆಯ ಸುತನ ಸೀಳಿ

ಕರುಣಿ ಕೃಷ್ಣನಂಘ್ರಿ ನಿರುತ ಭಜಿಪ ವೀರ 2

ಸದ್ವೈಷ್ಣವರನೆಲ್ಲ ಉದ್ಧರಿಸಿ ಜಗದಿಮುದ್ದು 

ಕಮಲನಾಭ ವಿಠ್ಠಲನಂಘ್ರಿ ಭಜಿಪ3

***

 

No comments:

Post a Comment